CINE | ಮದರಾಸಿ ಸಿನಿಮಾ ಟ್ರೈಲರ್ ರಿಲೀಸ್: ಶಿವಕಾರ್ತಿಕೇಯನ್ ಆ್ಯಕ್ಷನ್ ಗೆ ಫ್ಯಾನ್ಸ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಮುಖ ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನದ ಹೊಸ ಸಿನಿಮಾ “ಮದರಾಸಿ” ಇದೀಗ ಟ್ರೈಲರ್ ಮೂಲಕ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ನಾಯಕನಾಗಿ ಕಾಣಿಸಿಕೊಂಡಿದ್ದು, ಕನ್ನಡದ ಪ್ರತಿಭಾವಂತಿ ನಟಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಭಾಷೆಯಲ್ಲಿಯೇ ಈ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬ ಕಾರಣದಿಂದಲೇ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

ಟ್ರೈಲರ್ ನೋಡಿದರೆ, ಮದರಾಸಿ ಚಿತ್ರವು ಆ್ಯಕ್ಷನ್ ಮತ್ತು ಥ್ರಿಲ್ಲಿಂಗ್ ಸನ್ನಿವೇಶಗಳಿಂದ ತುಂಬಿಕೊಂಡಿದೆ. ವಿಶೇಷವಾಗಿ ಶಿವಕಾರ್ತಿಕೇಯನ್ ಅವರ ಆ್ಯಕ್ಷನ್ ಅವತಾರ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಇನ್ನೊಂದೆಡೆ, ಬಾಲಿವುಡ್ ನಟ ವಿದ್ಯುತ್ ಜಾಮ್ವಾಲ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ತೀವ್ರತೆಯನ್ನು ಹೆಚ್ಚಿಸಿದೆ. ಚೆನ್ನೈನ ಹಿನ್ನೆಲೆಯ ಕಥೆಯನ್ನು ಆಧರಿಸಿದ ಈ ಚಿತ್ರವು, ಭಯಾನಕ ಸ್ಪೋಟದ ಸುತ್ತ ಹರಡುವ ಕುತೂಹಲಕರ ಕಥೆಯನ್ನು ತೋರಿಸುತ್ತದೆ.

ರುಕ್ಮಿಣಿ ವಸಂತ್ ಇಲ್ಲಿ ಸರಳ ಮತ್ತು ನೈಸರ್ಗಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್‌ಗಿಂತಲೂ ಅಭಿನಯಕ್ಕೆ ಹೆಚ್ಚಿನ ಅವಕಾಶವಿರುವ ಪಾತ್ರವನ್ನು ಅವರು ನಿರ್ವಹಿಸಿರುವುದು ಗಮನಾರ್ಹ. ಅವರ ಪಾತ್ರದಲ್ಲಿ ಭಾವನಾತ್ಮಕ ತೀವ್ರತೆ ಮತ್ತು ಭಯದ ಮಿಶ್ರಣವೂ ಕಾಣಿಸಿಕೊಂಡಿದೆ.

ಮದರಾಸಿ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು, ಸುದೀಪ್ ಎಲಾಮನ್ ಕ್ಯಾಮರಾವರ್ಕ್ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾದ ಹಾಡುಗಳು ಮತ್ತು ಟ್ರೈಲರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಸಿನಿಮಾ ಭರ್ಜರಿ ವೀಕ್ಷಣೆಗೆ ಸಜ್ಜಾಗಿದೆ.

ಈ ಚಿತ್ರವು ಸೆಪ್ಟೆಂಬರ್ 5ರಂದು ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ದಿನ ಕನ್ನಡದ “ಏಳುಮಲೆ” ಹಾಗೂ “ನಾನು ಮತ್ತು ಗುಂಡ-2” ಚಿತ್ರಗಳೂ ರಿಲೀಸ್ ಆಗುತ್ತಿರುವುದರಿಂದ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!