ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇತ್ತೀಚೆಗೆ ಸದ್ದು ಮಾಡಿರುವ ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿ ಮಡೆನೂರು ಮನು ವಿರುದ್ಧ ನಟಿಯೊಬ್ಬರು ಮನು ವಿರುದ್ಧ ಅತ್ಯಾ*ಚಾರ ಹಾಗೂ ನಂಬಿಕೆದ್ರೋಹದ ಕೇಸ್ ದಾಖಲಿಸಿದ್ದರು. ಇದೀಗ ಇವರಿಬ್ಬರು ರಾಜೀ ಮಾಡಿಕೊಂಡಿದ್ದು ಕೇಸ್ ಇತ್ಯರ್ಥಗೊಂಡಿದೆ.
ಹೈಕೋರ್ಟ್ ಪೀಠವು ಪ್ರಕರಣವನ್ನು ಇತ್ಯರ್ಥ ಮಾಡಿದೆ. ಆರೋಪ ಪ್ರಕರಣದಲ್ಲಿ ರಾಜೀ ಮಾಡಿಕೊಳ್ಳಲು ಇಬ್ಬರು ಒಪ್ಪಿಕೊಂಡ ಹಿನ್ನೆಲೆಯಲ್ಲೇ ಪ್ರಕರಣವನ್ನು ಕೋರ್ಟ್ ಇತ್ಯರ್ಥಪಡಿಸಿದೆ. ಬೆನ್ನಲ್ಲೇ ಕೋರ್ಟ್ ಆವರಣದಲ್ಲಿ ಮಡೆನೂರು ಮನು ಹಾಗೂ ಸಂತ್ರಸ್ತೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ ಧಾರವಾಡ ಹೈಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ಆಗಬೇಕಿತ್ತು. ಆ ವೇಳೆ ಸಂತ್ರಸ್ಥೆಯು ವಕೀಲರ ಸಾಕ್ಷಿಯಾಗಿ ಮಡೆನೂರು ಮನು ಮುಂದೆಯೇ “ನಾನು ಖುಷಿಯಿಂದ ಕೇಸ್ ಹಿಂಪಡೆಯುತ್ತಿದ್ದೇನೆ” ಎಂದು ಹೇಳಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಆ ಸಂತ್ರಸ್ಥೆಯು ಮಾಧ್ಯಮದ ಮುಂದೆ ಬಂದು, “ಮನು ನನ್ನ ಮದುವೆ ಆಗ್ತೀನಿ ಅಂತ ಹೇಳಿದ್ದನು. ಕುಡಿದು ಬಂದು ನನ್ನ ಮೇಲೆ ಅತ್ಯಾ*ಚಾರ ಮಾಡಿದ್ದನು. ಅಷ್ಟೇ ಅಲ್ಲದೆ ಸಿಕ್ಕಾಪಟ್ಟೆ ನಿಂದಿಸಿದ್ದಾನೆ, ನನಗೆ ಕುಡಿಸಿ ಬಲವಂತದಿಂದ ಅತ್ಯಾ*ಚಾರ ಮಾಡಿದ್ದಾನೆ ಎಂದು ಹೇಳಿದ್ದರು. ಅದಾದ ಬಳಿಕ ನಟ ಶಿವರಾಜ್‌ಕುಮಾರ್, ಧ್ರುವ ಸರ್ಜಾ, ದರ್ಶನ್ ಬಗ್ಗೆ ಮನು ಹೇಳಿರುವ ಆಡಿಯೋವನ್ನು ರಿಲೀಸ್ ಮಾಡಲಾಗಿತ್ತು. ಇದನ್ನು ನೋಡಿ ಈ ನಟರ ಫ್ಯಾನ್ಸ್ ಆಕ್ರೋಶಗೊಂಡಿದ್ದರು.
ಅಷ್ಟೇ ಅಲ್ಲದೆ ಮನು ಅವರನ್ನು ಕಿರುತೆರೆ, ಹಿರಿತೆರೆಯಿಂದ ಬ್ಯಾನ್ ಮಾಡಬೇಕು ಎಂದು ಕೂಡ ಒತ್ತಾಯಿಸಲಾಗಿತ್ತು. ಇನ್ನು ಮನು ನಟನೆಯ ʼಕುಲದಲ್ಲಿ ಕೀಳ್ಯಾವುದೋʼ ಸಿನಿಮಾ ರಿಲೀಸ್‌ಗೆ ಒಂದು ದಿನ ಮುಂಚೆ ಅವರು ಜೈಲು ಸೇರಿದ್ದರು. ಈ ಮೂಲಕ ಅವರ ವರ್ಷಗಳ ಕನಸು ಕಮರಿತ್ತು. ಕೆಲ ದಿನಗಳ ಕಾಲ ಜೈಲಿನಲ್ಲಿದ್ದು, ಆ ಬಳಿಕ ಹೊರಬಂದರು.
ಪರಪ್ಪನ ಅಗ್ರಹಾರದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ, ಅತ್ಯಾಚಾರ ಕೇಸ್‌ನಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ ಎಂದು ಮನು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.