ಮಧೂರು ಬಡ್ಸ್ ಶಾಲೆಯಲ್ಲಿ ಮಕ್ಕಳ ದಿನಾಚಣೆಯಂದು ಮನಸೆಳೆಯಿತು ಮಕ್ಕಳಿಗಾಗಿನ ನೃತ್ಯ ಕಾರ್ಯಕ್ರಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಕ್ಕಳ‌ ದಿನಾಚರಣೆಯ ಪ್ರಯುಕ್ತ ಮಧೂರು ಪಂಚಾಯತ್ ಬಡ್ಸ್ ಶಾಲೆಯ ಮಕ್ಕಳಿಗಾಗಿ ಮಂಗಳವಾರದಂದು ನಾಟ್ಯರಂಗ ಪುತ್ತೂರಿನ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು

ಮಧೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಗೋಪಾಲಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಧೂರು ಪಂಚಾಯತ್ ಸ್ಥಾಯಿ ಸಮಿತಿ ಛೇರ್ಮನ್ ರಾಧಾಕೃಷ್ಣ ಸುರ್ಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಯಶೋದ ಸುಂದರ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯೆಜನನಿ,ಮುರಳಿ, ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರದಾನ ಸಂಚಾಲಕರಾದ ಗುರುಪ್ರಸಾದ್ ಕೋಟೆಕಣಿ ಶುಭಹಾರೈಸಿದರು. ಉಪಾಧ್ಯಕ್ಷೆ ಸ್ಮಿಜ ವಿನೋದ್ ಉಪಸ್ಥಿತರಿದ್ದರು. ಬಡ್ಸ್ ಶಾಲಾ ಅಧ್ಯಾಪಕಿ ಕವಿತಾ ಸ್ವಾಗತಿಸಿದರು.

ನಾಟ್ಯ ರಂಗಪುತ್ತೂರು ಇದರ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಮಕ್ಕಳಿಗಾಗಿ ನೃತ್ಯಪ್ರದರ್ಶನ ನೀಡುವುದರ ಜೊತೆಗೆ ನೃತ್ಯದ , ವಿವಿಧ ಹಸ್ತ, ನೃತ್ಯದ ಚಲನೆಗಳನ್ನು ಬಡ್ಸ್ ಶಾಲಾ ಮಕ್ಕಳಿಗೆ ಪರಿಚಯಿಸಿ, ಅವರೂ ನೃತ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ನಾಟ್ಯಮಂಟಪ ಮಧೂರು ನೃತ್ಯಸಂಸ್ಥೆ ಯ ನಿರ್ದೇಶಕಿ ಸೌಮ್ಯ ಶ್ರೀಕಾಂತ್ ಕಾರ್ಯಕ್ರಮದ ನೇತ್ರತ್ವ ವಹಿಸಿದ್ದರು. ಮುಂದಿನ ದಿನಗಳಲ್ಲಿ ಸೌಮ್ಯ ಶ್ರೀಕಾಂತ ಬಟ್ಸ್ ಶಾಲಾ ಮಕ್ಕಳಿಗೆ ನೃತ್ಯತರಬೇತಿ ನೀಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here