ಹೊಸ ದಿಗಂತ ಡಿಜಿಟಲ್ ಡೆಸ್ಕ್
ಮಧ್ಯಪ್ರದೇಶದ ರೈಸನ್‍ನಲ್ಲಿ ನಡೆದ ಸ್ವಾತಂತ್ರ್ಯೋತ್ವದ ಅಂಗವಾಗಿ ನಡೆದ ಭಾಷಣದ ವೇಳೆ ಆರೋಗ್ಯ ಸಚಿವ ಪ್ರಭುರಾಮ್ ಚೌಧರಿ ಮೂರ್ಛೆ ಹೋಗಿ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ರೈಸನ್ ನಲ್ಲಿ ಆರೋಗ್ಯ ಸಚಿವ ಡಾ.ಪ್ರಭುರಾಮ್ ಚೌಧರಿ ಅವರು ಪಥಸಂಚಲನ ಸಂದರ್ಭದಲ್ಲಿ ಗೌರವ ವಂದನೆ ಸ್ವೀಕರಿಸಲು ವೇದಿಕೆಯಲ್ಲಿದ್ದಾಗ ಕುಸಿದುಬಿದ್ದರು.
ಕೂಡಲೇ ಸಚಿವರನ್ನು ಅಲ್ಲಿದ್ದ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಅಲ್ಲಿಂದ ಭೋಪಾಲ್‍ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ್ದು, ಪ್ರಸ್ತುತ ನಿಗಾದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.