Wednesday, January 28, 2026
Wednesday, January 28, 2026
spot_img

ಇಶಾ ಫೌಂಡೇಶನ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಇಶಾ ಫೌಂಡೇಶನ್ ನ ಗ್ಯಾಸ್ ಆಧಾರಿತ ಸ್ಮಶಾನದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಆ ಸ್ಮಶಾನವು ಸಾಮಾಜಿಕ ಕಲ್ಯಾಣಕ್ಕೆ ಸೇವೆ ಸಲ್ಲಿಸುತ್ತದೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಜೊತೆಗೆ ಇಶಾ ಫೌಂಡೇಶನ್​ನಿಂದ ಕಾಲಭೈರವ ಧಗನ ಮಂಟಪದ ನಿರ್ಮಾಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠ, ತಮಿಳುನಾಡು ಗ್ರಾಮ ಪಂಚಾಯತ್ ನಿಯಮಗಳ ಅಡಿಯಲ್ಲಿ ವಸತಿ ಪ್ರದೇಶ ಅಥವಾ ಕುಡಿಯುವ ನೀರು ಸರಬರಾಜು ಇರುವ ಪ್ರದೇಶದಿಂದ ಸುಮಾರು 90 ಮೀಟರ್ ಒಳಗೆ ಸ್ಮಶಾನಕ್ಕೆ ಪರವಾನಗಿ ನೀಡುವುದಕ್ಕೆ ಯಾವುದೇ ನಿಷೇಧವಿಲ್ಲ ಎಂದು ಹೇಳಿದೆ. ನಿಯಮಗಳ ಪ್ರಕಾರ, ಗ್ರಾಮ ಪಂಚಾಯತ್‌ನಿಂದ ಪರವಾನಗಿ ಪಡೆಯುವುದು ಮಾತ್ರ ಅಗತ್ಯ ಎಂದು ಸ್ಪಷ್ಟಪಡಿಸಿದೆ.

ಸೂಕ್ತ ಅನುಮತಿ ಪಡೆದಿದ್ದರೆ ಸ್ಮಶಾನ ನಿರ್ಮಿಸುವುದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುವುದಿಲ್ಲ. ಗ್ಯಾಸ್ ಆಧಾರಿತ ಸ್ಮಶಾನವು ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ಆಧುನಿಕ ಸೌಲಭ್ಯವಾಗಿರುವುದರಿಂದ, ಅದು ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !