ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ಧನುಷ್ʼಗೆ ಮದ್ರಾಸ್ ಹೈಕೋರ್ಟ್ ಸಮನ್ಸ್ ನೀಡಿದೆ.
ಇತ್ತೀಚೆಗೆ ನಟ ಧನುಷ್ ಅವರನ್ನ ತಮ್ಮ ಮಗ ಎಂದು ಹೇಳಿಕೊಂಡು, ದಂಪತಿಗಳಿಬ್ಬರು ಮದ್ರಾಸ್ ಹೈಕೋರ್ಟ್ʼಗೆ ಅರ್ಜಿ ಸಲ್ಲಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದರು.
ಇದೀಗ ನಟ ಪಿತೃತ್ವ ಪರೀಕ್ಷೆಯ ನಕಲಿ ದಾಖಲೆಗಳನ್ನ ಸಲ್ಲಿಸಿದ್ದಾರೆ ಎಂದು ಕತಿಸೇರನ್ ಮತ್ತು ಅವರ ಪತ್ನಿ ಮೀನಾಕ್ಷಿ ಹೇಳಿಕೆಯ ಆಧಾರದ ಮೇಲೆ ಹೈಕೋರ್ಟ್ ನಟನಿಗೆ ಸಮನ್ಸ್ ನೀಡಿದೆ.
ಪಿತೃತ್ವದ ದಾಖಲೆಗಳು ನಕಲಿ ಎಂದು ಸಾಬೀತು ಪಡಿಸಲು ಯಾವುದೇ ಪೂರಕ ದಾಖಲೆಗಳಿಲ್ಲ ಎಂದು 2020ರಲ್ಲಿ ನ್ಯಾಯಾಲಯವು ಪ್ರಕರಣವನ್ನ ವಜಾಗೊಳಿಸಿತ್ತು.