ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ 300(Madrid Spain Masters Super 300) ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು( PV Sindhu) ಸೋಲು ಕಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು ಇಂಡೋನೇಷ್ಯಾದ ಜಾರ್ಜಿಯಾ ಟುಂಜುಂಗ್(G. Tunjung) ವಿರುದ್ಧ 21-8, 21-8 ನೇರ ಗೇಮ್ಗಳ ಅಂತರದಿಂದ ಪರಾಭವಗೊಂಡರು.
2023ರ ಋತುವಿನಲ್ಲಿ ಸಿಂಧು ಕಂಡ ಮೊದಲ ಮೊದಲ ಫೈನಲ್ ಇದಾಗಿತ್ತು.
ಶನಿವಾರ ರಾತ್ರಿ ನಡೆದ ಸೆಮಿಫೈನಲ್ ಕಾದಾಟದಲ್ಲಿ ದ್ವಿತೀಯ ಶ್ರೇಯಾಂಕದ ಸಿಂಧು ಸಿಂಗಾಪುರದ ಕೆಳ ರ್‍ಯಾಂಕಿಂಗ್ ಆಟಗಾರ್ತಿ ಯೋ ಜಿಯಾ ಮಿನ್ ವಿರುದ್ಧ ಭಾರೀ ಹೋರಾಟ ನಡೆಸಿ 24-22, 22-20 ಅಂತರದ ಗೆಲುವು ಸಾಧಿಸಿದ್ದರು. ಈ ಸಾಧನೆಯೊಂದಿಗೆ ಎದುರಾಳಿ ಮಿನ್ ವಿರುದ್ಧ ಆಡಿದ ಐದೂ ಪಂದ್ಯಗಳಲ್ಲಿ ಸಿಂಧು ಗೆಲುವು ದಾಖಲಿಸಿದ್ದರು.