April 16, 2026
Thursday, April 16, 2026
spot_img

ಅಮೆರಿಕದಿಂದ ಮಡುರೊ ಅರೆಸ್ಟ್, ಭಾರತದಿಂದ ಹಫೀಜ್ ಬಂಧನ ಆಗಲ್ವಾ? ಓವೈಸಿ ಪ್ರಶ್ನೆಗೆ ಬಿಜೆಪಿ ಕೌಂಟರ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೈನ್ಯ ವೆನೆಜುವೆಲಾಗೆ ನುಗ್ಗಿ ಅಲ್ಲಿನ ಚುನಾಯಿತ ಅದ್ಯಕ್ಷರನ್ನ ಅರೆಸ್ಟ್ ಮಾಡಿದೆ. ಇದು ಪರ ವಿರೋಧಕ್ಕೂ ಕಾರಣವಾಗಿದೆ.

ಈ ಬೆಳವಣಿಗೆ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಹತ್ವದ ಪ್ರಶ್ನೆಯನ್ನು ಪ್ರಧಾನಿ ಮೋದಿ ಸರ್ಕಾರಕ್ಕೆ ಕೇಳಿದ್ದಾರೆ. ಅಮೆರಿಕದ ವೆನಿಜುವೆಲಾಗೆ ನುಗ್ಗಿ ಅಲ್ಲಿನ ಅಧ್ಯಕ್ಷರನ್ನೇ ಬಂಧಿಸುವುದಾದರೆ, ಮೋದಿ ಸರ್ಕಾರ ಪಾಕಿಸ್ತಾನಕ್ಕೆ ನುಗ್ಗಿ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಝ್ ಸಯೀದ್‌ನನ್ನು ಬಂಧಿಸಿ ಕರೆತರಬೇಕು ಎಂದು ಓವೈಸಿ ಆಗ್ರಹಿಸಿದ್ದಾರೆ. ಇದೇ ವೇಳೆ ಬಿಜೆಪಿ ನೀಡಿದ ಉತ್ತರಕ್ಕೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಓವೈಸಿ ಪ್ರಶ್ನೆ ಭಾರತದಲ್ಲಿ ಭಾರಿ ಚರ್ಚೆಯಾಗುತ್ತಿದ್ದಂತೆ ಬಿಜೆಪಿ ಸಂಸದ ಗುಲಾಮ್ ಅಲಿ ಖಟಾನಾ ತಕ್ಕ ಉತ್ತರ ನೀಡಿದ್ದಾರೆ. ಭಾರತ ಅತೀ ಜೊಡ್ಡ ಪ್ರಜಾಪ್ರಭುತ್ವ ದೇಶ. ಭಾರತ ಪ್ರತಿ ನೆರೆ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಬಯಸುತ್ತದೆ. ಭಾರತದ ಟಾರ್ಗೆಟ್ ಉಗ್ರರೆ ಹೋರತು ಯಾವುದೇ ದೇಶವಲ್ಲ ಎಂದಿದ್ದಾರೆ.

ಭಾರತದ ಮೇಲೆ ಉಗ್ರರ ದಾಳಿಯಾದಾಗ ಭಾರತದ ಟಾರ್ಗೆಟ್ ದಾಳಿ ಮಾಡಿದ ಉಗ್ರರು, ಸಂಚು ರೂಪಿಸಿದ ಉಗ್ರರು, ಉಗ್ರರ ತರಬೇತಿ ಕ್ಯಾಂಪ್‌ಗಳ ಮೇಲೆ ದಾಳಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕುವ ಪ್ರಯತ್ನ ಮಾಡುತ್ತದೆ. ಭಾರತ ಯಾವತ್ತೂ ಒಂದು ದೇಶದ ಮೇಲೆ ದಾಳಿ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ ಎಂದು ಗುಲಾಮ್ ಅಲಿ ಖಟಾನ ಹೇಳಿದ್ದಾರೆ.

ಅಮೆರಿಕದ ರೀತಿ ದೇಶದ ಮೇಲೆ ದಾಳಿ ಮಾಡಿ ಬಂಧಿಸುವ ಪರಿಪಾಠ ಭಾರತದಲ್ಲಿ ಇಲ್ಲ. ಸೂಕ್ತ ಸಂದರ್ಭದಲ್ಲಿ ದಾಳಿ ಮಾಡಿದ ಪ್ರತಿಯೊಬ್ಬ ಉಗ್ರನ ಮೇಲೆ ಭಾರತ ತಕ್ಕ ಪಾಠ ಕಲಿಸುತ್ತದೆ ಎಂದಿದ್ದಾರೆ.

ಇದೇ ವೇಳೆ ಬಿಹಾರ ಸಚಿವ ದಿಲೀಪ್ ಜೈಸ್ವಾಲ್ ಕೂಡ ಅಸಾದುದ್ದೀನ್ ಓವೈಸಿ ವಿರುದ್ಧ ಹರಿಹಾಯ್ದಿದ್ದಾರೆ. ಓವೈಸಿ ವರ್ಣರಂಜಿತ ಮಾತುಗಳನ್ನಾಡಿ ಗಮನಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಭಾರತದ ನೀತಿ, ನೆರೆ ರಾಷ್ಟ್ರಗಳ ಜೊತೆಗಿನ ಸಂಬಂಧ ಎಲ್ಲವೂ ತಿಳಿದುಕೊಂಡು ಹೇಳಿಕೆ ನೀಡಿದರೆ ಉತ್ತಮ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !