ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗರಾಜ್ದಲ್ಲಿ ಮಹಾಕುಂಭಮೇಳ ಪ್ರಯುಕ್ತವಾಗಿ ಜನಸಾಗರವೂ ಹರಿದು ಬರುತ್ತಿದೆ. ನಿರೀಕ್ಷೆಯನ್ನು ಮೀರಿ ಗಂಗೆಯಲ್ಲಿ ಮಿಂದೇಳಲು ಭಕ್ತಕೋಟಿ ಪ್ರಯಾಗರಾಜ್ನತ್ತ ನುಗ್ಗಿ ಬರುತ್ತಿದೆ.
144 ವರ್ಷಕ್ಕೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ಭಕ್ತಕೋಟಿ ಹರಿದು ಬರುತ್ತಿದೆ. ಇದರಿಂದ ಸಾಮಾನ್ಯವಾಗಿ ಎಲ್ಲಾ ಸಾರಿಗೆ ವ್ಯವಸ್ಥೆಗಳು ಜನರಿಂದು ತುಂಬಿ ತುಳುಕುತ್ತಿವೆ. ಅದರಲ್ಲೂ ವಿಮಾನಯಾನ ಎಂಬುದು ತುಂಬಾ ದುಬಾರಿಯಾಗಿದೆ ಎಂಬ ಕೂಗುಗಳು ಜನರಿಂದ ಕೇಳಿ ಬರುತ್ತಿವೆ.
ದೆಹಲಿಯಿಂದ ಪ್ರಯಾಗರಾಜ್ಗೆ ಪ್ರಯಾಣ ಬೆಳೆಸಲು ಪ್ರಯಾಣಿಕರು ಸಾಮಾನ್ಯ ದರಕ್ಕಿಂತ ಶೇಕಡಾ 21ರಷ್ಟು ಹೆಚ್ಚಿನ ಹಣ ನೀಡಬೇಕಿದೆ ಇದೆಲ್ಲವನ್ನು ಗಮನಿಸಿದ ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ 81 ಹೆಚ್ಚಿನ ವಿಮಾನಗಳನ್ನು ಪೂರೈಸಲು ಮುಂದಾಗಿದೆ
ಇದಷ್ಟೇ ಅಲ್ಲಾ ಎಲ್ಲಾ ವಿಮಾನಯಾನ ಸಂಸ್ಥೆಗಳೊಂದಿಗೆ ಮೀಟಿಂಗ್ ನಡೆಸಿದ ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೆಚ್ಚಿನ ವಿಮಾನಗಳನ್ನು ಪ್ರಯಾಗರಾಜ್ಗೆ ಮೀಸಲಿಡಿ. ಟಿಕೆಟ್ ದರದಲ್ಲಿ ಸುಧಾರಣೆ ಮಾಡಿ ಎಂದು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಜಿಸಿಎ, ಪ್ರಯಾಗರಾಜ್ ಹಾಗೂ ಭಕ್ತರ ನಡುವಿನ ಸಂಪರ್ಕ ಸುಗಮಗೊಳಿಸಲು ಹೆಚ್ಚಿನ 81 ಫ್ಲೈಟ್ಗಳ ಹಾರಾಟಕ್ಕೆ ಅನುಮೋದನೆ ನೀಡಲಾಗಿದೆ. ಪ್ರಯಾಗರಾಜ್ಗೆ ವಿಮಾನಯಾನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಒಂದು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸದ್ಯ ದೇಶದಾದ್ಯಂತದಿಂದ ಪ್ರಯಾಗರಾಜ್ಗೆ ಪ್ರಯಾಣ ಬೆಳೆಸಲಿರುವ ವಿಮಾನಗಳ ಸಂಖ್ಯೆ 132ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.
ಇನ್ನು 76ನೇ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಪ್ರಯಾಗರಾಜ್ದ ತ್ರಿವೇಣಿ ಸಂಗಮದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಇದನ್ನೂ ಕಣ್ತುಂಬಿಕೊಳ್ಳಲು ಜನರು ಇನ್ನು ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದು ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇನ್ನು ಜನವರಿ 13 ರಿಂದ ಈ ಮಹಾಕುಂಭಮೇಳ ಆರಂಭಗೊಂಡಿದ್ದು ಫೆಬ್ರವರಿ 26ರವರೆಗೆ ಒಟ್ಟು 10 ಕೋಟಿ ಭಕ್ತರು ಗಂಗೆಯಲ್ಲಿ ಮಿಂದೆದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಬರುವ ದಿನಗಳಲ್ಲಿ ಮೌನಿ ಅಮವಾಸ್ಯೆಯೂ ಕೂಡ ಇದ್ದು ಆ ದಿನ ಪ್ರಯಾಗರಾಜಕ್ಕೆ ಹರಿದು ಬರುವ ಭಕ್ತರ ಸಂಖ್ಯೆ ಡಬಲ್ ಆಗುವ ಅಂದಾಜು ಇದ್ದು ಅದಕ್ಕಾಗಿ ಈಗಾಗಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿಯೇ 150 ಹೆಚ್ಚುವರಿ ರೈಲುಗಳನ್ನು ಪ್ರಯಾಣಿಕರಿಗಾಗಿ ವ್ಯವಸ್ಥೆ ಮಾಡಲಾಗಿದೆ.