March 6, 2026
Friday, March 6, 2026
spot_img

ಮಹಾಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮೊದಲ ಮೂವಿ ಶೂಟಿಂಗ್ ಪೂರ್ಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿನಾ ಭೋಸ್ಲೆ ತಮ್ಮ ಮೊದಲ ಹಿಂದಿ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.

ಕಳೆದ ವರ್ಷ ಮಹಾಕುಂಭಮೇಳದಲ್ಲಿ ಮಣಿ ಸರಗಳನ್ನು ಮಾರುತ್ತಿದ್ದ ವೇಳೆ ಮೊನಾಲಿಸಾ ಭೋಸ್ಲೆ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಇದಾದ ಬಳಿಕ ಅವರಿಗೆ ಹಿಂದಿ ಚಿತ್ರರಂಗದಿಂದ ಆಫರ್ ಕೂಡ ಬಂದಿತ್ತು. ನೋಡನೋಡುತ್ತಿದ್ದಂತೆಯೇ ಅವರು ಹೀರೋಯಿನ್ ಆಗಿಬಿಟ್ಟರು. ಈಗ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.

‘ದಿ ಡೈರಿ ಆಫ್ ಮಣಿಪುರ್’ ಸಿನಿಮಾದಲ್ಲಿ ಮೊನಾಲಿಸಾ ನಟಿಸುತ್ತಿದ್ದು, ಈ ಚಿತ್ರಕ್ಕೆ ಸನೋಜ್ ಮಿಶ್ರಾ ಅವರು ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ಚಿತ್ರಂಗದ ಖ್ಯಾತ ನಟ ರಾಜ್​​ಕುಮಾರ್ ರಾವ್ ಅವರ ಸಹೋದರ ಅಮಿತ್ ರಾವ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಸಿನಿಮಾವನ್ನು ನಾಲ್ಕು ಹಂತಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಉತ್ತರ ಪ್ರದೇಶ, ಮಣಿಪುರ, ನೇಪಾಳ ಮತ್ತು ಡೆಹರಾಡೂನ್​​ನಲ್ಲಿ ಚಿತ್ರೀಕರಣ ನಡೆಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !