ಹೊಸದಿಗಂತ ಡಿಜಿಟಲ್ ಡೆಸ್ಕ್:
ವೇಣೂರಿನ ಭಗವಾನ್ ಶ್ರೀಬಾಹುಬಲಿ ಸ್ವಾಮಿಗೆ ಇಂದಿನಿಂದ ಒಂಬತ್ತು ದಿನಗಳ ಮಹಾಮಸ್ತಕಾಭಿಷೇಕ ನಡೆಯಲಿದೆ.
ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಲಿದ್ದು, ಇಡೀ ಜಗತ್ತೇ ಈ ಸಂಭ್ರಮವನ್ನು ಎದುರು ನೋಡುತ್ತದೆ. ಒಂಬತ್ತು ದಿನಗಳು ಜಲಾಭಿಷೇಕ, ಕಷಾಯ, ಕಲ್ಕಚೂರ್ಣ, ಅರಿಶಿಣ, ಶ್ರೀಗಂಧ, ಅಷ್ಟಗಂಧ, ಹಾಲು, ಎಳನೀರು ಹಾಗೂ ಕೇಸರಿ ದ್ರವ್ಯಗಳಿಂದ ಅಭಿಷೇಕ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಮಸ್ತಕಾಭಿಷೇಕ ನಡೆಯಲಿದೆ.