ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರ ಜಿಲ್ಲೆಯ ಭಿವದನೋರಾ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ಪ್ರತಿದಿನ ತಮ್ಮ ಪ್ರಾಣವನ್ನೇ ಪಣಕ್ಕಿಡಬೇಕಾಗಿದೆ.
ಬಿವದನೋರ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ನದಿ ದಾಟಬೇಕು. ಥರ್ಮಾಕೋಲ್‌ನಿಂದ ಮಾಡಿದ ತೆಪ್ಪವು ಅವರಿಗೆ ನದಿ ದಾಟಲು ಆಧಾರವಾಗಿದೆ. ಸ್ವಲ್ಪ ವ್ಯತ್ಯಾಸವಾದರೂ, ಸಮತೋಲನ ತಪ್ಪಿದರೂ ತೆಪ್ಪ ಪಲಿಟ ಆಗುತ್ತದೆ. ಹೀಗಾದರೆ ಮಕ್ಕಳ ಜೀವಕ್ಕೇ ಅಪಾಯ. ಭಿವದನೋರ ಗ್ರಾಮದಲ್ಲಿ ಪ್ರತಿದಿನ ಮಕ್ಕಳು ಬೇರೆ ದಾರಿಯಿಲ್ಲದೆ ಆ ತೆಪ್ಪದಲ್ಲಿ ಶಾಲೆಗೆ ಹೋಗುತ್ತಾರೆ. ಈ ಕ್ರಮದಲ್ಲಿ ನದಿಯಲ್ಲಿ ಹಾವುಗಳು ತೆಪ್ಪವನ್ನೇರಲು ಪ್ರಯತ್ನಸುತ್ತವಂತೆ. ಹೀಗಾಗಿ ಮಕ್ಕಳು ಪ್ರತಿದಿನ ಕೋಲು ಹಿಡಿದು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ.
ಬಿವಧನೋರಾ ಜಯಕ್ವಾಡಿ ಅಣೆಕಟ್ಟಿನ ಸಮೀಪದಲ್ಲಿದೆ. ಅಣೆಕಟ್ಟು ಹಿನ್ನೀರು ಗ್ರಾಮವನ್ನು ಸುತ್ತುವರೆದಿವೆ. ಸೇತುವೆ ನಿರ್ಮಾಣದ ಬೇಡಿಕೆ ಇನ್ನೂ ಬಾಕಿ ಇದೆ. ಹಳ್ಳಿಯಲ್ಲಿ ಮಕ್ಕಳಿಗೆ ಶಾಲೆಗೆ ಹೋಗಲು ದಪ್ಪ ಥರ್ಮಾಕೋಲ್ ತೆಪ್ಪಗಳೇ ಆಧಾರ. ವಿದ್ಯಾರ್ಥಿಗಳು ತಮ್ಮ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಆ ತೆಪ್ಪದಲ್ಲಿ ಪ್ರತಿದಿನ ಹಿನ್ನೀರು ದಾಟಿ ಶಾಲೆಗೆ ಹೋಗುತ್ತಾರೆ.
ಆ ಗ್ರಾಮಸ್ಥರು ಸುಮಾರು 50 ವರ್ಷಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಹೇಳೋದೇ ಬೇರೆ. ಅಣೆಕಟ್ಟು ನಿರ್ಮಾಣದ ವೇಳೆ ಪುನರ್ ವಸತಿ ಮಾಡಿದರೂ ಕೆಲವರು ಅಲ್ಲೇ ಉಳಿದುಕೊಂಡಿದ್ದರಿಂದ ಆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ.