ಮಹಾರಾಷ್ಟ್ರ ಪ್ರವಾಹಕ್ಕೂ ಆಲಮಟ್ಟಿ ಅಣೆಕಟ್ಟೆಗೂ ಯಾವುದೇ ಸಂಬಂಧ ಇಲ್ಲ: ಸಚಿವ ಎಂ.ಬಿ. ಪಾಟೀಲ್

ಹೊಸದಿಗಂತ ವರದಿ ವಿಜಯಪುರ:

ಮಹಾರಾಷ್ಟ್ರ ಪ್ರವಾಹಕ್ಕೂ ಆಲಮಟ್ಟಿ ಅಣೆಕಟ್ಟೆಗೂ ಯಾವುದೇ ರೀತಿ ಸಂಬಂಧ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಆಲಮಟ್ಟಿ ಅಣೆಕಟ್ಟೆ ಎತ್ತರದಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ವಿಚಾರ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಆ ರೀತಿ ಏನು ಆಗೋದಿಲ್ಲ. ಈಗಾಗಲೇ ಈ ಸಂಬಂಧ ರಿಪೋರ್ಟ್ ಗಳು ಬಂದಿವೆ ಎಂದರು.

ಇದು ಎರಡು ಬಾರಿ ಪ್ರೂವ್ ಆಗಿದೆ. ಆ ಆತಂಕಗಳು ಎಲ್ಲವೂ ಸುಳ್ಳು ಎಂದರು.

ಆಲಮಟ್ಟಿ ಅಣೆಕಟ್ಟೆ ಒಂದು ಮೀಟರ್ ಹೆಚ್ಚಳಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರಕ್ಕೆ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಒಂದೇ ಮೀಟರ್ ಹೆಚ್ಚು ಮಾಡಲಿ, ನಾಲ್ಕು ಮೀಟರ್ ಹೆಚ್ಚು ಮಾಡಲಿ ಕಾನೂನಾತ್ಮಕವಾಗಿ ಮಾಡಬೇಕು. ನಮ್ಮ ಟೆಕ್ನಿಕಲ್ ಟೀಂ ಜೊತೆಗೆ ಚರ್ಚಿಸಲಾಗುವುದು ಎಂದರು.

ಎತ್ತರ ಹೆಚ್ಚಳವನ್ನು ಕಾನೂನು ತಂಡ ಹೇಳಬೇಕಾಗುತ್ತದೆ. ಸಚಿವ ಶಿವಾನಂದ ಪಾಟೀಲರ ಹೇಳಿಕೆಯನ್ನು ಪರಿಶೀಲನೆ ಮಾಡುತ್ತೀವಿ. ಮೋಹನ್ ಕಾತರಿಕಿ ಹೇಳಿದ್ದಾರೆ ಎಂದು ಹೇಳಿದ್ದಾರೆ ಅದನ್ನು ಪರಿಶೀಲನೆ ಮಾಡ್ತೀವಿ ಎಂದರು.

ಒಂದು ಮೀಟರ್ ಹೆಚ್ಚಳದಿಂದ ಕಾನೂನು ತೊಡಕು ಇಲ್ಲ ಎಂದರೆ ಮಾಡೋಣ. ಎತ್ತರ ಹೆಚ್ಚಳ ಜೊತೆಗೆ ಭೂಸ್ವಾಧೀನ ಸಹ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಒಂದು ಮೀಟರ್ ಅಂತರದಲ್ಲಿ ಎಷ್ಟು ಹಳ್ಳಿ ಬರುತ್ತವೆ ಅವುಗಳ ಸ್ಥಳಾಂತರ ಸಹ ಮಾಡಬೇಕಾಗುತ್ತದೆ. ಸಲಹೆ ಬಂದಾಗ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ. ಈ ಬಗ್ಗೆ ಮೋಹನ್ ಕಾತರಕಿ ಜೊತೆಗೆ ಮಾತನಾಡಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!