ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದಲ್ಲಿ (Maharashtra) ಬಿಜೆಪಿ, ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನೆ (Shiv Sena) ಮತ್ತು ಅಜಿತ್ ಪವಾರ್ (Ajit Pawar) ಅವರ ಎನ್‌ಸಿಪಿ ಒಳಗೊಂಡಿರುವ ಮೈತ್ರಿಯು ತಮ್ಮ ಸೀಟು ಹಂಚಿಕೆ ಮಾತುಕತೆ ಮುಗಿಸಿವೆ.
ಎನ್‌ಡಿಎ (NDA) ಮೈತ್ರಿಕೂಟದ ಅಜಿತ್ ಪವಾರ್ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸುವ ನಾಲ್ಕು ಕ್ಷೇತ್ರಗಳನ್ನು ಪಡೆದುಕೊಂಡಿದ್ದಾರೆ. ಶರದ್ ಪವಾರ್ ಅವರ ಸೋದರಳಿಯ ಮತ್ತು ನಿಜವಾದ ಎನ್‌ಸಿಪಿಯ ನಾಯಕ, ಬಾರಾಮತಿ, ರಾಯ್‌ಗಢ, ಶಿರೂರು ಮತ್ತು ಪರ್ಭಾನಿ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ.
ರಾಜ್ಯದ 48 ಸ್ಥಾನಗಳ ಪೈಕಿ 31ರಲ್ಲಿ ಬಿಜೆಪಿ, 13ರಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ನಾಲ್ಕರಲ್ಲಿ ಅಜಿತ್ ಪವಾರ್ ಅವರ ಎನ್‌ಸಿಪಿ ಸ್ಪರ್ಧಿಸಲಿದೆ.