ಇಂದು ದೇಶಾದ್ಯಂತ ಮಹಾಶಿವರಾತ್ರಿ ಆಚರಣೆ, ದೇಗುಲಗಳಲ್ಲಿ ಭೈರವನಿಗೆ ವಿಶೇಷ ಪೂಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಾಡಿನೆಲ್ಲೆಡೆ ಇಂದು ಸಂಭ್ರಮದಿಂದ ಶಿವರಾತ್ರಿ ಆಚರಣೆ ಆರಂಭವಾಗಿದೆ. ರಾಜ್ಯದ ಹಾಗೂ ದೇಶದ ವಿವಿಧ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಆರಂಭವಾಗಿವೆ.

ಬೆಳ್ಳಂಬೆಳಗ್ಗೆಯೇ ಭಕ್ತರು ಶಿವನ ದೇಗುಲಗಳ ಮುಂದೆ ನಿಂತಿದ್ದು, ದೇವರ ದರುಶನಕ್ಕಾಗಿ ಕಾಯುತ್ತಿದ್ದಾರೆ. ಬೆಂಗಳೂರಿನ ಕಾಡುಮಲ್ಲೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು, ಮುಂಜಾನೆಯಿಂದಲೇ ಶಿವಲಿಂಗಕ್ಕೆ ರುದ್ರಾಭಿಷೇಕ ನಡೆಯುತ್ತಿದೆ.

ಶಿವನಿಗೆ ದೇವರಿಗೆ ರುದ್ರಾಭಿಷೇಕ, ರುದ್ರ ಪಾರಾಯಣ ನೆರವೇರಲಿದೆ. ದೇವಾಲಯದಲ್ಲಿ ವಿಶೇಷ ಅಲಂಕಾರವನ್ನ ಮಾಡಲಾಗಿದ್ದು, 2,000 ಮುಸುಕಿನ ಜೋಳ ಇಪ್ಪತ್ತುವರೆ ಕಬ್ಬು ಹಾಗೂ 1,500 ಎಳನೀರಿನಿಂದ ಅಲಂಕಾರ ಮಾಡಲಾಗಿದೆ. ಬೆಳಗ್ಗೆ 5.30ರ ವರೆಗೆ ಸೇವಾ ಚೀಟಿ ಪಡೆದಿರುವ 1,500 ಜನ ಕುಟುಂಬ ಸಮೇತರಾಗಿ ಭಾಗಿಯಾಗಿದ್ದು, ಬೆಳಗ್ಗೆ 5.30ರ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಲಾಗಿದೆ.
60,000 ಜನಕ್ಕೆ ಅನ್ನಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 6.30 ರಿಂದ ಬೆಳಗಿನ ಜಾವ 2.30ರ ವರೆಗೆ ಜಾಗರಣೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!