February 15, 2026
Sunday, February 15, 2026
spot_img

ಮಹಾಶಿವರಾತ್ರಿ | ಶಿವನಿಗೆ ಇಷ್ಟವಾದ ನೈವೇದ್ಯ ಬೆಲ್ಲದ ಪಾಯಸ, ಅಕ್ಕಿ ತಂಬಿಟ್ಟು ಮಾಡೋದು ಹೇಗೆ ನೋಡಿ!

ಮಹಾಶಿವರಾತ್ರಿ ದಿನ ಶಿವನಿಗೆ ಸರಳ ಹಾಗೂ ಸಾತ್ವಿಕ ನೈವೇದ್ಯಗಳನ್ನು ಅರ್ಪಿಸುವುದು ವಿಶೇಷ. ಅವುಗಳಲ್ಲಿ ಬೆಲ್ಲದ ಪಾಯಸ ಮತ್ತು ಅಕ್ಕಿ ತಂಬಿಟ್ಟು ಶಿವನ ಪ್ರಿಯವಾದ ನೈವೇದ್ಯ. ಇವು ಆರೋಗ್ಯಕರವಾಗಿದ್ದು, ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಶಿವನ ಪ್ರಿಯವಾದ ನೈವೇದ್ಯ ಮಾಡಿ ಅರ್ಪಿಸಿದ್ರೆ ಆ ದೇವರು ಒಲಿಯದೆ ಇರುವನೇ ಹೇಳಿ.

ಬೆಲ್ಲದ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು:
ಅಕ್ಕಿ, ಬೆಲ್ಲ, ಹಾಲು, ತುಪ್ಪ, ಏಲಕ್ಕಿ ಪುಡಿ, ಕಾಜು, ದ್ರಾಕ್ಷಿ

ಮಾಡುವ ವಿಧಾನ:
ಮೊದಲು ಅಕ್ಕಿಯನ್ನು ತೊಳೆದು ಬೇಯಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ನೀರಿನಲ್ಲಿ ಕರಗಿಸಿ, ಅದನ್ನು ಬೇಯಿಸಿದ ಅನ್ನಕ್ಕೆ ಸೇರಿಸಿ. ನಂತರ ಹಾಲು ಹಾಕಿ ನಿಧಾನವಾಗಿ ಕುದಿಯಲು ಬಿಡಿ. ಕೊನೆಯಲ್ಲಿ ತುಪ್ಪದಲ್ಲಿ ಕರಿದ ಕಾಜು, ದ್ರಾಕ್ಷಿ ಮತ್ತು ಏಲಕ್ಕಿ ಪುಡಿ ಸೇರಿಸಿದರೆ ಸುವಾಸನೆಯ ಬೆಲ್ಲದ ಪಾಯಸ ಸಿದ್ಧ.

ಅಕ್ಕಿ ತಂಬಿಟ್ಟು ಮಾಡಲು ಬೇಕಾಗುವ ಪದಾರ್ಥಗಳು:
ಅಕ್ಕಿ ಹಿಟ್ಟು, ಬೆಲ್ಲ, ತೆಂಗಿನ ತುರಿ, ಏಲಕ್ಕಿ ಪುಡಿ, ತುಪ್ಪ

ಮಾಡುವ ವಿಧಾನ:
ಬೆಲ್ಲವನ್ನು ಸ್ವಲ್ಪ ನೀರಿನಲ್ಲಿ ಕರಗಿಸಿ, ಅದಕ್ಕೆ ಅಕ್ಕಿ ಹಿಟ್ಟು ಮತ್ತು ತೆಂಗಿನ ತುರಿ ಸೇರಿಸಿ ಚೆನ್ನಾಗಿ ಕಲಸಿ. ಏಲಕ್ಕಿ ಪುಡಿ ಸೇರಿಸಿ ಮಿಶ್ರಣವನ್ನು ಮೃದುವಾಗಿ ಮಾಡಿಕೊಳ್ಳಿ. ಕೈಗೆ ತುಪ್ಪ ಹಚ್ಚಿಕೊಂಡು ಸಣ್ಣ ಸಣ್ಣ ಉಂಡೆ ಮಾಡಿದರೆ ಅಕ್ಕಿ ತಂಬಿಟ್ಟು ಸಿದ್ಧವಾಗುತ್ತದೆ.

ಈ ಎರಡೂ ನೈವೇದ್ಯಗಳು ಶಿವನಿಗೆ ಅತ್ಯಂತ ಪ್ರಿಯ. ಭಕ್ತಿಭಾವದಿಂದ ತಯಾರಿಸಿ ಅರ್ಪಿಸಿದರೆ ಪೂಜೆಯ ಸಾರ್ಥಕತೆ ಇನ್ನಷ್ಟು ಹೆಚ್ಚುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !