ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ನೀಲಂಬೆನ್ ಪಾರಿಖ್ (93) ಅವರು ನಿಧನರಾಗಿದ್ದಾರೆ. ನೀಲಂಬೆನ್ ಮಹಾತ್ಮ ಗಾಂಧಿಯವರ ಪುತ್ರ ಹರಿದಾಸ್ ಗಾಂಧಿಯವರ ಮೊಮ್ಮಗಳು.
ಅವರ ಅಂತಿಮ ಯಾತ್ರೆ ಇಂದು ಬೆಳಗ್ಗೆ 8 ಗಂಟೆಗೆ ಅವರ ನಿವಾಸದಿಂದ ಪ್ರಾರಂಭವಾಗಿದ್ದು, ವೀರ್ವಾಲ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ನೀಲಂಬೆನ್ ಪಾರಿಖ್ ಯಾವಾಗಲೂ ಮಹಿಳಾ ಕಲ್ಯಾಣ ಮತ್ತು ಮಾನವ ಸೇವೆಗೆ ಸಮರ್ಪಿತರಾಗಿದ್ದರು. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ತರಬೇತಿ ನೀಡುವುದು ಇವರ ಉದ್ದೇಶವಾಗಿತ್ತು. ನೀಲಂಬೆನ್ 1955 ರಲ್ಲಿ ಪದವಿ ಪಡೆದ ನಂತರ ಬಾಂಬೆಯನ್ನು ತೊರೆದರು. ಅವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಾ ತಮ್ಮ ಜೀವನವನ್ನು ಕಳೆಯಲು ನಿರ್ಧರಿಸಿದ್ದರು ಎನ್ನಲಾಗಿದೆ.