ಹೊಸದಿಗಂತ ವರದಿ, ವಿಜಯನಗರ:
‘ಸಂಪಾಯಿತಲೇ ಪರಾಕ್…’ ಇದು ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಡೆಂಕಣಮರಡಿಯಲ್ಲಿ ಸೋಮವಾರ ಸಂಜೆ ನೆರವೇರಿದ ಮೈಲಾರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಣ್ಣ ನುಡಿದ ಕಾರ್ಣಿಕ.
ಸಂಪಾಯಿತಲೇ ಪರಾಕ್ ಎಂಬ ಎರಡೇ ಶಬ್ದದಲ್ಲಿ ಈ ವರ್ಷದ ದೈವವಾಣಿ ಹೇಳಿದರು.
ಗೊರವಯ್ಯನ ಹೇಳಿಕೆಯಿಂದ ನೆರೆದಿದ್ದ ಲಕ್ಷಾಂತರ ಜನರಿಂದ ವ್ಯಕ್ತವಾದ ಹರ್ಷಾದ್ಘೋರ ಮುಗಿಲು ಮುಟ್ಟಿತು.
ಈ ಸಲ ಭಾರಿ ಮಳೆ, ಬೆಳೆ ಚೆನ್ನಾಗಿ ಆಗಿ ರೈತರ ಬಾಳು ಹಸನಾಗುತ್ತದೆ ಎಂದು ಕಾರ್ಣಿಕ ನುಡಿ ಅರ್ಥೈಸಲಾಗಿದೆ.