ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 15 IPS ಅಧಿಕಾರಿಗಳ ವರ್ಗಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

10 ಮಂದಿ ಐಎಎಸ್‌ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ 15 ಮಂದಿ ಐಪಿಎಸ್‌ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗವಾದವರಲ್ಲಿ ಹಿರಿಯ ಪೊಲೀಸ್‌ ಅಧಿಕಾರಿ, ಬೆಂಗಳೂರು ನಗರ ಪಶ್ಚಿಮ ವಲಯದ ಇನ್ಸ್‌ಪೆಕ್ಟರ್‌ ಜನರಲ್‌ ಮತ್ತು ಹೆಚ್ಚುವರಿ ಕಮಿಷನರ್‌ ಆಗಿರುವ ಸಂದೀಪ್‌ ಪಾಟೀಲ್‌ ಕೂಡಾ ಸೇರಿದ್ದಾರೆ. ಅವರನ್ನು ಕರ್ನಾಟಕ ಮೀಸಲು ಪೊಲೀಸ್‌ ಪಡೆಯ ಐಜಿಪಿಯಾಗಿ ನಿಯೋಜಿಸಲಾಗಿದೆ. ಈ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ಲಿಸ್ಟ್:‌

1. ಸಂದೀಪ್‌ ಪಾಟೀಲ್‌: ಕೆಎಸ್‌ಆಪಿ ಐಜಿಪಿ
2. ಚಂದ್ರಶೇಖರ್‌; ಎಡಿಜಿಪಿ ಆಂತರಿಕ ಭದ್ರತಾ ವಿಭಾಗ
3. ಮಾಲಿನಿ ಕೃಷ್ಣಮೂರ್ತಿ: ಎಡಿಜಿಪಿ ಕಾರಾಗೃಹ
4. ಅರುಣ್ ಚಕ್ರವರ್ತಿ: ಎಡಿಜಿಪಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ
5. ಸತೀಶ್ ಕುಮಾರ್: ಅಡಿಷನಲ್ ಕಮೀಷನರ್ ಪಶ್ಚಿಮ
6. ರಮಣ್ ಗುಪ್ತ ಉತ್ತರ ವಲಯ ಐಜಿಪಿ
7. ಬೋರಲಿಂಗಯ್ಯ: ಡಿಐಜಿ ದಕ್ಷಿಣ ವಲಯ
8. ವಂಶಿ ಕೃಷ್ಣ: ಡಿಐಜಿ ಸಿಐಡಿ ಎಕಾನಾಮಿಕ್ ಅಫೆನ್ಸ್
9. ಋಶ್ಯಂತ್: ದಕ್ಷಿಣ ಕನ್ನಡ ಎಸ್ಪಿ
10. ಡಾ. ಕೆ. ರಾಮಚಂದ್ರ: ರಾಜ್ಯ ಪೊಲೀಸ್‌ ವಸತಿ ನಿಗಮದ ಎಂ.ಡಿ.
11. ಮನೀಷ್‌ ಕರ್ಭಿಕರ್:‌ ಸಿಐಡಿ ಎಡಿಜಿಪಿ, ಆರ್ಥಿಕ ಅಪರಾಧಗಳ ವಿಭಾಗ
12. ವಿಪುಲ್‌ ಕುಮಾರ್‌: ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಕಮೀಷನರ್‌
13. ಪ್ರವೀಣ್‌ ಮಧುಕರ್‌ ಪವಾರ್‌: ಐಜಿಪಿ, ಸಿಐಡಿ
14. ವಿಕಾಸ್‌ ಕುಮಾರ್‌ ವಿಕಾಸ್‌: ಐಜಿಪಿ, ಆಂತರಿಕ ಭದ್ರತಾ ವಿಭಾಗ
15. ಎಸ್.ಎನ್‌, ಸಿದ್ದರಾಮಪ್ಪ: ಐಜಿಪಿ, ಬೆಂಗಳೂರು ಪ್ರಧಾನ ಕಚೇರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!