ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸಿಕ್ಕಿಂನ ನಾಥು ಲಾ ಮೌಂಟೇನ್ ಪಾಸ್‌ನಲ್ಲಿ ಇಂದು ಸಂಭವಿಸಿದ ಭಾರೀ ಹಿಮಕುಸಿತದಿಂದ ಹಲವಾರು ಪ್ರವಾಸಿಗರು ಹಿಮದಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇಂದು ಮಧ್ಯಾಹ್ನ 12:20ರ ವೇಳೆಗೆ ಹಿಂಪಾತ ಸಂಭವಿಸಿದ್ದು,
ಈ ವೇಳೆ150 ಕ್ಕೂ ಹೆಚ್ಚು ಪ್ರವಾಸಿಗರು ಈ ಪ್ರದೇಶದಲ್ಲಿದ್ದರು ಎಂದು ವರದಿಯಾಗಿದೆ.
ಇದೀಗ ಅಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈವರೆಗೆ 22 ಪ್ರವಾಸಿಗರನ್ನು ರಕ್ಷಿಸಲಾಗಿದೆ.