ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ: ರಾತ್ರೋರಾತ್ರಿ 200ಕ್ಕೂ ಹೆಚ್ಚು ರೋಗಿಗಳು ಶಿಫ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಲಕ್ನೋದಲ್ಲಿನ ಲೋಕಬಂಧು ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಸೋಮವಾರ ರಾತ್ರಿ 9.30ರ ಸುಮಾರಿಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಏಕಾಏಕಿ ಬೆಂಕಿಯ ಜ್ವಾಲೆ ಏರುತ್ತಿದ್ದಂತೆ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಜನರು ಭಯದಿಂದ ಕೂಗಾಡುತ್ತಾ ಆಸ್ಪತ್ರೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಆಸ್ಪತ್ರೆ ಆವರಣ ಹೊಗೆಯಿಂದ ತುಂಬಿತ್ತು. ಎರಡನೇ ಮಹಡಿಯಲ್ಲಿ ಬೆಂಕಿ ಸ್ವಲ್ಪ ಹೊತ್ತಿನಲ್ಲೇ ಭೀಕರ ಸ್ವರೂಪ ಪಡೆಯಿತು. ವೇಗವಾಗಿ ಬೆಂಕಿ ಹರಡಿಕೊಂಡಿತು. ಹೀಗಾಗಿ ಆಸ್ಪತ್ರೆಯಿಂದ ವೈದ್ಯರು ಮತ್ತು ಇತರ ಸಿಬ್ಬಂದಿ ಜೀವ ಉಳಿಸಿಕೊಳ್ಳಲು ತಕ್ಷಣವೇ ಹೊರಗೆ ಓಡಿದರು.

200ಕ್ಕೂ ಹೆಚ್ಚು ರೋಗಿಗಳನ್ನು ಸ್ಟ್ರೆಚರ್‌ಗಳಲ್ಲಿ ಹೊರಗೆ ಕರೆದೊಯ್ಯಲಾಯಿತು. ಇದೇ ವೇಳೆ, ಅನೇಕ ಕುಟುಂಬ ಸದಸ್ಯರು ರೋಗಿಗಳನ್ನು ಎತ್ತುಕೊಂಡೇ ಆಸ್ಪತ್ರೆಯಿಂದ ಹೊರಕ್ಕೆ ಓಡಿಬಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!