ನಾಲ್ಕು ತಿಂಗಳಲ್ಲಿ ಮತ್ತೆ ಕೇಜ್ರಿವಾಲ್ ಸಂಪುಟದಲ್ಲಿ ಮೇಜರ್ ಸರ್ಜರಿ: ಅತಿಶಿಗೆ ಹೆಗಲಿಗೆ ಮತ್ತಷ್ಟು ಜವಾಬ್ದಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ನಾಲ್ಕು ತಿಂಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿಗೆ ಸಚಿವ ಸಂಪುಟ (Cabinet) ಪುನರ್ ರಚನೆ ಮಾಡಿದ್ದಾರೆ.

ಇತ್ತಿಚೆಗೆ ಸಂಪುಟ ಸೇರಿದ್ದ ಸಚಿವೆ ಅತಿಶಿಗೆ ಹೆಚ್ಚುವರಿ ಮೂರು ಖಾತೆಗಳನ್ನು ನೀಡಿದ್ದು, ಸರ್ಕಾರದ ಎರಡನೇ ಪ್ರಭಾವಿ ಸಚಿವೆಯಾಗಿದ್ದಾರೆ.

ಅತಿಶಿಗೆ (Atishi Marlena) ಹಣಕಾಸು, ಯೋಜನೆ ಮತ್ತು ಆದಾಯದಂತಹ ಮಹತ್ವದ ಖಾತೆಗಳನ್ನು ನೀಡಿದ್ದರು. ಅವರ ಶಿಫಾರಸ್ಸನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೆನಾ (Vinai Kumar Saxena) ಅನುಮೋದಿಸಿದ್ದಾರೆ.

ಶಿಕ್ಷಣ ಸುಧಾರಣೆಗಳಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ (DCM Manish Sisodia) ಜೊತೆಗೆ ನಿಕಟವಾಗಿ ಕೆಲಸ ಮಾಡಿದ ಅತಿಶಿ ಅವರು ಸದ್ಯ ಮುಖ್ಯಮಂತ್ರಿ ಸೇರಿದಂತೆ 7 ಸಚಿವರ ದೆಹಲಿ ಸಂಪುಟದಲ್ಲಿ ಏಕೈಕ ಮಹಿಳೆಯಾಗಿದ್ದಾರೆ. ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಪ್ರವಾಸೋದ್ಯಮ, ಕಲೆ, ಭಾಷೆ ಮತ್ತು ಸಂಸ್ಕೃತಿ, ಪಿಡಬ್ಲ್ಯುಡಿ ಮತ್ತು ಪವರ್ ಸೇರಿ ಆರು ಸಚಿವಾಲಯಗಳ ಉಸ್ತುವಾರಿ ನೀಡಲಾಗಿತ್ತು.

ಕೆಲ ದಿನಗಳ ಹಿಂದಷ್ಟೆ ಸಾರ್ವಜನಿಕ ಸಂಪರ್ಕ ಉಸ್ತುವಾರಿಯನ್ನು ನೀಡಲಾಯಿತು. ಈಗ ಹಣಕಾಸು ಮತ್ತು ಆದಾಯದ ಹೆಚ್ಚುವರಿ ಶುಲ್ಕಗಳ ಜವಬ್ದಾರಿ ನೀಡಿದೆ. ಈ ಮೂಲಕ ಅತಿಶಿ ನಿರ್ವಹಿಸುತ್ತಿರುವ ಇಲಾಖೆಗಳ ಸಂಖ್ಯೆ 6 ರಿಂದ 10ಕ್ಕೆ ಏರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!