January14, 2026
Wednesday, January 14, 2026
spot_img

ಛತ್ತೀಸ್‌ಗಢದಲ್ಲಿ ಮಹಾ ಶರಣಾಗತಿ: 29 ಮಂದಿ ನಕ್ಸಲರು ಶರಣು!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ 29 ಮಂದಿ ನಕ್ಸಲರು ಮುಖ್ಯವಾಹಿನಿ ಸೇರಿದ್ದಾರೆ.

ಗೊಗುಂಡಾ ಪ್ರದೇಶದ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜದೂರ್ ಸಂಘಟನೆಯ ನಾಯಕ ಪೊಡಿಯಂ ಬುದ್ರಾ ಸೇರಿದ್ದಾರೆ. ಇವರ ಮೇಲೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಡಿಎಕೆಎಂಎಸ್ ಸದಸ್ಯರು, ಮಿಲಿಷಿಯಾ ಸಿಬ್ಬಂದಿ ಹಾಗೂ ಜನತಾನಾ ಸರ್ಕಾರ್‌ನ ಕಾರ್ಯಕರ್ತರು ಈ ಗುಂಪಿನಲ್ಲಿದ್ದರು. ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾನ್ ಅವರು ಮಾತನಾಡಿ, ರಾಜ್ಯ ಸರ್ಕಾರದ ಪೂನಾ ಮಾರ್ಗೆಂ ಯೋಜನೆಯಡಿ ಈ ಶರಣಾಗತಿ ನಡೆದಿದೆ.

ಗೊಗುಂಡಾದಲ್ಲಿ ಇತ್ತೀಚೆಗೆ ಸ್ಥಾಪಿಸಲಾದ ಭದ್ರತಾ ಕ್ಯಾಂಪ್‌ನಿಂದ ತೀವ್ರ ಆ್ಯಂಟಿ-ನಕ್ಸಲ್ ಕಾರ್ಯಾಚರಣೆಗಳು, ಶೋಧ ಕಾರ್ಯಾಚರಣೆಗಳು ನಡೆದಿವೆ. ಇದರಿಂದ ಮಾವೋವಾದಿಗಳ ಬೆಂಬಲ ವ್ಯವಸ್ಥೆ ದುರ್ಬಲಗೊಂಡಿದೆ ಎಂದು ಅವರು ಹೇಳಿದರು.

ಗೊಗುಂಡಾದ ದಟ್ಟ ಕಾಡು ಮತ್ತು ದುರ್ಗಮ ಪ್ರದೇಶ ಒಂದು ಕಾಲದಲ್ಲಿ ಮಾವೋವಾದಿಗಳ ದರ್ಭಾ ವಿಭಾಗಕ್ಕೆ ಸುರಕ್ಷಿತ ಆಶ್ರಯವಾಗಿತ್ತು. ಆದರೆ, ಹೊಸ ಭದ್ರತಾ ಕ್ಯಾಂಪ್‌ನಿಂದ ಒತ್ತಡ ಹೆಚ್ಚಾದ ನಂತರ ಈ ಶರಣಾಗತಿಗಳು ಸಾಧ್ಯವಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ 8 ರಂದು ದಂತೆವಾಡಾದಲ್ಲಿ 63 ಮಂದಿ, ಜನವರಿ 7 ರಂದು ಸುಕ್ಮಾದಲ್ಲೇ 26 ಮಂದಿ ಶರಣಾಗತರಾಗಿದ್ದರು. 2025 ರಲ್ಲಿ ರಾಜ್ಯಾದ್ಯಂತ 1500ಕ್ಕೂ ಹೆಚ್ಚು ನಕ್ಸಲರು ಶರಣಾಗತರಾಗಿದ್ದಾರೆ. ಕೇಂದ್ರ ಸರ್ಕಾರವು ಮಾರ್ಚ್ 31ರೊಳಗೆ ದೇಶದಿಂದ ನಕ್ಸಲ್‌ವಾದವನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವ ಗುರಿಯನ್ನು ಇಟ್ಟುಕೊಂಡಿದೆ.

Most Read

error: Content is protected !!