April 16, 2026
Thursday, April 16, 2026
spot_img

ತಮಿಳುನಾಡು ಕಾಂಗ್ರೆಸ್‌-ಡಿಎಂಕೆ ಸೀಟು ಹಂಚಿಕೆ ಫೈನಲ್? ಕೈ ನಾಯಕರಿಗೆ ಸ್ಟಾಲಿನ್ ಕೊಟ್ಟ ಆಫ಼ರ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನ ಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಅಖಾಡಕ್ಕೆ ಇಳಿದಿದ್ದು, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (DMK) ಹಾಗೂ ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಒಪ್ಪಂದದ ನಡೆಯುತ್ತಿದೆ.

ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯ ಔಪಚಾರಿಕತೆಗಳು ಇಂದು ಪೂರ್ಣಗೊಂಡಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಬೆಳಿಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುವ ಮೂಲಕ ಚುನಾವಣಾ ಒಪ್ಪಂದವನ್ನು ಅಂತಿಮಗೊಳಿಸಿದರು. ಅಂತಿಮ ನಿರ್ಧಾರ ಶೀಘ್ರವೇ ಹೊರಬೀಳಲಿದೆ.

ಕಾಂಗ್ರೆಸ್‌ 34 ವಿಧಾನಸಭಾ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಆದರೆ ಎರಡು ರಾಜ್ಯಸಭಾ ಸ್ಥಾನಗಳೊಂದಿಗೆ 29 ವಿಧಾನಸಭಾ ಸ್ಥಾನಗಳನ್ನು ನೀಡುವ ಇರಾದೆಯೂ ಡಿಎಂಕೆ ಒಳಗಿದೆ.

ಕಳೆದ ಕೆಲವು ದಿನಗಳಿಂದ ಆಯ್ಕೆ ಮತ್ತು ಸ್ಥಾನಗಳ ಸಂಖ್ಯೆಯ ಬಗ್ಗೆ ಎರಡೂ ಪಕ್ಷಗಳ ನಡುವೆ ಚರ್ಚೆಗಳು ನಡೆಯುತ್ತಿವೆ. ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಮುಖಾಮುಖಿ ಮಾತುಕತೆ ನಡೆಸಿದ ಒಂದು ದಿನದ ನಂತರ ಈ ಪ್ರಗತಿ ಕಂಡುಬಂದಿದೆ.

ಆದರೆ, ಟಿಎನ್ ಸಿಸಿ ಅಧ್ಯಕ್ಷ ಸೆಲ್ವಪೆರುಂತಗೈ ಈ ಭೇಟಿಯನ್ನು ಸೌಜನ್ಯ ಭೇಟಿ ಎಂದು ಹೇಳಿದ್ದು, ಸ್ಥಾನ ಹಂಚಿಕೆ ಮಾತುಕತೆ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದು ಅವರು ಹೇಳಿದರು. ಡಿಎಂಕೆಯಿಂದ ಯಾವುದೇ ಗಡುವು ನಿಗದಿಯಾಗಿಲ್ಲವೆಂದೂ ಹೇಳಿದರು.

ಕಾಂಗ್ರೆಸ್ ಸ್ಥಾನ ಹಂಚಿಕೆ ಸಮಿತಿ ಸದಸ್ಯರು ಹೈಕಮಾಂಡ್‌ಗೆ ಡಿಎಂಕೆ ಗರಿಷ್ಠ 25 ಸ್ಥಾನಗಳು ಹಾಗೂ ಒಂದು ರಾಜ್ಯಸಭಾ ಸ್ಥಾನ ಮಾತ್ರ ನೀಡಲು ಸಿದ್ಧವಿದ್ದು, ಮುಖ್ಯಮಂತ್ರಿಯವರೊಂದಿಗೆ ಚರ್ಚೆಯ ನಂತರ ಅದನ್ನು 29 ಸ್ಥಾನಗಳವರೆಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !