ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀರು ತುಂಬಿದ ಹೊಂಡದಲ್ಲಿ ಸ್ನಾನ ಮಾಡುವಾಗ ಐದು ಬಾಲಕಿಯರು ಸೇರಿದಂತೆ ಆರು ಮಕ್ಕಳು ಮುಳುಗಿ ಸಾವನ್ನಪ್ಪಿದ ಘಟನೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ.
ಕೇಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಲೋಹರ್ಗವ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮೃತರನ್ನು ದೀಕ್ಷಾ ಕುಮಾರಿ(12), ಸೋನಾಕ್ಷಿ ಕುಮಾರಿ(9), ಪ್ರಿಯಾ ಕುಮಾರಿ(7), ಆರ್ಯಾಧ್ಯ ಕುಮಾರಿ(11), ಚೋಟಿ ಕುಮಾರಿ(8), ಮತ್ತು ಪ್ರಿನ್ಸ್ ಕುಮಾರ್(11) ಎಂದು ಗುರುತಿಸಲಾಗಿದೆ.
ಕೇಸರಿಯಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ರಾಹುಲ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಓರ್ವ ಬಾಲಕಿ ಮೊದಲು ಹೊಂಡಕ್ಕೆ ಇಳಿದಿದ್ದು, ಮುಳುಗಲು ಪ್ರಾರಂಭಿಸಿದ ನಂತರ ಆಕೆಯ ರಕ್ಷಣೆಗೆ ಹೋಗಿ ಇತರರು ಸಹ ನೀರಿಗೆ ಜಾರಿಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.



