ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದ್ದು, ಪ್ರಕರಣದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ಹೌದು, ಶಿವಮೊಗ್ಗದ ತುಂಗಾ ತೀರದ ಟ್ರಯಲ್ ಬ್ಲಾಸ್ಟ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿದ್ದ ಮಾಜ್ ಮುನೀರ್ ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಮೊದಲ ಆರೋಪಿಯಾಗಿದ್ದಾರೆ. ಆತನನ್ನು ಜೈಲಿಗೆ ಕಳುಹಿಸುವ ಮುನ್ನ ಹಲವು ಕಡೆ ಸ್ಫೋಟದ ರೇಖಾಚಿತ್ರ ರೂಪಿಸಿದ್ದಕ್ಕಾಗಿ ಸೆಕ್ಷನ್ ಎ1 ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತಿನ್ ಮತ್ತು ಮುಸಾವಿರ್ ಎಂಬುವರನ್ನು ಎರಡು ಮತ್ತು ಮೂರನೇ ಆರೋಪಿಗಳೆಂದು ಹೆಸರಿಸಲಾಗಿದೆ. ನಂತರ ಬಂಧಿಸಲ್ಪಟ್ಟ ಮುಜಾಮಿಲ್ ಷರೀಪ್ ನಾಲ್ಕನೇ ಆರೋಪಿ ಎಂದು ಮೂಲಗಳು ತಿಳಿಸಿವೆ.