September 28, 2026
Monday, September 28, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 33| ಪಾಲಕ್‌ ಸೊಪ್ಪಿನಿಂದ ರುಚಿಯಾದ ಗೊಜ್ಜು ಮಾಡಿಕೊಳ್ಳಿ, ಬಿಸಿ ಅನ್ನದ ಜೊತೆ ತಿಂದ್ರೆ ಸೂಪರ್‌

ಸಾಮಾಗ್ರಿಗಳು
ಪಾಲಕ್‌ ಸೊಪ್ಪು
ಬೆಳ್ಳುಳ್ಳಿ
ಶುಂಠಿ
ಜೀರಿಗೆ
ಉಪ್ಪು
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಸಾಂಬಾರ್‌ ಪುಡಿ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಾಕಿ ಬಾಡಿಸಿ.
ಆನಂತರ ಈರುಳ್ಳಿ ಹಾಕಿ ಬಾಡಿಸಿ
ಇತ್ತ ನೀರಿಗೆ ಪಾಲಕ್‌ ಹಾಕಿ ಎರಡು ನಿಮಿಷ ಬೇಯಿಸಿ, ಆಫ್‌ ಮಾಡಿ ಇದನ್ನು ಮಿಕ್ಸಿಗೆ ಹಾಕಿ
ಜೊತೆಗೆ ಶುಂಠಿ, ಬೆಳ್ಳುಳ್ಳಿ, ಜೀರಿಗೆ ಹಸಿಮೆಣಸು ಹಾಕಿ ರುಬ್ಬಿ
ಆನಂತರ ಈ ಮಿಶ್ರಣವನ್ನು ಈರುಳ್ಳಿಗೆ ಹಾಕಿ, ಎಣ್ಣೆ ಬಿಡುವವರೆಗೂ ಬಾಡಿಸಿ, ಸ್ವಲ್ಪ ಸಾಂಬಾರ್‌ ಪುಡಿ ಹಾಕಿ
ಆನಂತರ ಇದಕ್ಕೆ ಅನ್ನ ಮಿಕ್ಸ್‌ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ರೆಡಿ

Must Read