March 8, 2026
Sunday, March 8, 2026
spot_img

ಈ ಸಲದ Women’s Dayಗೆ ನಿನಗೆ ನೀನೇ ಪ್ರತಿಜ್ಞೆ ಮಾಡ್ಕೋ, ಅದನ್ನ ನೆನಪಿಟ್ಟು ಫಾಲೋ ಮಾಡು

ಮಾರ್ಚ್ 8 ಬಂದರೆ “ಹ್ಯಾಪಿ ವುಮೆನ್ಸ್ ಡೇ” ಎಂಬ ಪೋಸ್ಟ್‌ಗಳು ಫೋನ್ ನಲ್ಲಿ ತುಂಬಿ ಹೋಗುತ್ತವೆ. ಆದರೆ ಒಂದು ಪ್ರಶ್ನೆ ಕೇಳಿಕೊಳ್ಳೋಣ ಈ ದಿನ ನಿಜವಾಗಿಯೂ ನಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ತರ್ತಾ ಇದೆಯಾ?

ಮಹಿಳಾ ದಿನ ಅಂದ್ರೆ ಕೇವಲ ಒಂದು ದಿನದ ಸಂಭ್ರಮವಲ್ಲ. ಅದು ವರ್ಷಗಳಿಂದ ನಡೆದ ಹೋರಾಟಗಳ ನೆನಪು. ನಮ್ಮಿಗಿಂತ ಮುಂಚೆ ಹಲವಾರು ಮಹಿಳೆಯರು ಧ್ವನಿ ಎತ್ತಿದ ಕಾರಣಕ್ಕೆ ಇಂದು ನಾವು ಮಾತನಾಡಬಹುದು, ಕನಸು ಕಾಣಬಹುದು, ನಮ್ಮ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.

ಆದರೆ ಇನ್ನೂ ಒಂದು ಸತ್ಯ ಇದೆ — ಹಲವಾರು ಬಾರಿ ಮಹಿಳೆಯರ ಕನಸುಗಳನ್ನು ಸಮಾಜಕ್ಕಿಂತ ಹೆಚ್ಚು ತಾವೇ ಅದನ್ನು ಮುಚ್ಚಿ ಹಾಕುತ್ತಾರೆ. “ಇದು ನನಗೆ ಸಾಧ್ಯವಿಲ್ಲ,” “ಜನರು ಏನು ಅಂದುಕೊಳ್ಳುತ್ತಾರೆ?” ಎನ್ನುವ ಪ್ರಶ್ನೆಗಳು ಅವರ ಹೆಜ್ಜೆಗಳನ್ನು ನಿಧಾನಗೊಳಿಸುತ್ತವೆ.

ಇದನ್ನೂ ಓದಿ:

ಹೀಗಾಗಿ ಈ ಸಲದ Women’s Day ಗೆ ಇತರರಿಂದ ಶುಭಾಶಯಗಳ ನಿರೀಕ್ಷೆ ಬೇಡ. ಅದರ ಬದಲು ನಿನಗೆ ನೀನೇ ಒಂದು ಪ್ರತಿಜ್ಞೆ ಮಾಡ್ಕೋ. ನಿನ್ನ ಕನಸುಗಳನ್ನು ಸಣ್ಣಗಾಗಲು ಬಿಡಬೇಡ. ಯಾರ ಅನುಮತಿಯೂ ಬೇಕಿಲ್ಲ ಅನ್ನೋ ಧೈರ್ಯವನ್ನು ಮನಸ್ಸಿನಲ್ಲಿ ನೆಟ್ಟುಕೋ.

ನಿನ್ನ ಧ್ವನಿ ಕೇಳಿಸೋದು ತಪ್ಪಲ್ಲ. ಜೊತೆಗೆ ನಿನ್ನ ಸಂತೋಷ ಮುಖ್ಯ ಅನ್ನೋದನ್ನ ಮರೆಯಬೇಡ. ನೀನು ಯಾರಿಗೂ ನೆರಳು ನೀಡಬೇಕಾದವಳಲ್ಲ, ನೀನು ನಿನ್ನದೇ ಬೆಳಕು.

ಈ Women’s Day ಕೇವಲ ಸಂಭ್ರಮವಾಗಬಾರದು. ಅದು ಒಂದು ಆರಂಭವಾಗಲಿ. ಯಾಕೆಂದರೆ ಒಬ್ಬ ಮಹಿಳೆ ತನ್ನ ಮೇಲೆ ನಂಬಿಕೆ ಇಟ್ಟ ಕ್ಷಣದಿಂದಲೇ — ಅವಳ ಜೀವನದ ನಿಜವಾದ ಕ್ರಾಂತಿ ಆರಂಭವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !