ಸಾಮಾಗ್ರಿಗಳು
ಬೆಣ್ಣೆ
ರಾಗಿಹಿಟ್ಟು
ರವೆ
ತುಪ್ಪ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ನೀರು ಹಾಕಿ, ಜೊತೆಗೆ ಒಂದು ಸ್ಪೂನ್ ರಾಗಿಹಿಟ್ಟನ್ನು ಹಾಕಿ, ಉಪ್ಪು ಹಾಗೂ ತುಪ್ಪ ಹಾಕಿ
ನಂತರ ಸಣ್ಣ ರವೆಯನ್ನು ಹಾಕಿ
ನಂತರ ಅದು ಬಿಸಿಯಾದ ಮೇಲೆ ಅದಕ್ಕೆ ಹಿಟ್ಟು ಹಾಕಿ ಹತ್ತು ನಿಮಿಷ ಬಿಟ್ಟುಬಿಡಿ
ನಂತರ ಚೆನ್ನಾಗಿ ಮಿಕ್ಸ್ ಮಾಡಿ ಕಡೆಗೆ ಅರ್ಧ ಸ್ಪೂನ್ ಬೆಣ್ಣೆ ಹಾಕಿದ್ರೆ ಮುದ್ದೆ ರೆಡಿ
ಡಯಟ್ ಮಾಡುವವರು, ಎಣ್ಣೆಯಿಲ್ಲದ ತಿಂಡಿ ತಿನ್ನಬೇಕು ಎಂದುಕೊಳ್ಳುವವರು ಹಾಗೂ ಹೆಚ್ಚು ಹೊತ್ತು ಹಸಿವು ಆಗಬಾರದು ಎನ್ನುತ್ತಿದ್ದರೆ ಮಿಸ್ ಮಾಡದೆ ಬೆಳಗ್ಗೆ ಮುದ್ದೆ ಹಾಗೂ ಸಾಂಬಾರ್ ತಿಂದುಕೊಂಡು ಹೋಗಿ