ಗೋಧಿ ಹಿಟ್ಟು
ಪನ್ನೀರ್
ಈರುಳ್ಳಿ
ಹಸಿಮೆಣಸಿನಕಾಯಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕೊತ್ತಂಬರಿ ಸೊಪ್ಪು
ಚಿಲ್ಲಿ ಪೌಡರ್
ದನಿಯಾ ಪುಡಿ
ಗರಂ ಮಸಾಲ
ಅರಿಶಿನ ಪುಡಿ
ಉಪ್ಪು
ಎಣ್ಣೆ
ತುಪ್ಪ
ಒಂದು ಬಾಣಲೆಗೆ 2 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಸಾಸಿವೆ ಕಾಳು, ಹೆಚ್ಚಿದ ಕರಿಬೇವು, ಹೆಚ್ಚಿದ ಹಸಿಮೆಣಸಿನಕಾಯಿ, ಹೆಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಅರಿಶಿನ, ಚಿಲ್ಲಿ ಪೌಡರ್, ದನಿಯಾ ಪುಡಿ, ಗರಂ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತುರಿದ ಪನ್ನೀರ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಬೇಯಿಸಿ. ಸ್ಟಫಿಂಗ್ ಅನ್ನು ತಣ್ಣಗಾಗಲು ಇಡಿ.
ನಂತರ ಕಲಸಿದ ಚಪಾತಿ ಹಿಟ್ಟಿನ ಮಧ್ಯ ಈ ಸ್ಟಫಿಂಗ್‌ನ್ನು ಇಟ್ಟು ಲಟ್ಟಿಸಿ. ಕಾದ ಹೆಂಚಿನ ಮೇಲೆ ಹಾಕಿ ಎರಡೂ ಕಡೆ ಬೇಯಿಸಿ ಬೆಣ್ಣೆ ಅಥವಾ ತುಪ್ಪ ಹಾಕಿಕೊಂಡು ತಿಂದರೆ ಪರೋಟ ಅದ್ಭುತ