FOOD | ಬೇಕರಿ ಸ್ವೀಟ್‌ ಚಂಪಾಕಲಿಯನ್ನು ಮನೆಯಲ್ಲೇ ಮಾಡಿ, ಸಿಂಪಲ್‌ ರೆಸಿಪಿ ಇಲ್ಲಿದೆ ನೋಡಿ

ಸಾಮಾಗ್ರಿಗಳು

ಹಾಲು – ಒಂದೂವರೆ ಲೀಟರ್
ನಿಂಬೆ ಹಣ್ಣು – 2
ಬೇಕಿಂಗ್ ಸೋಡಾ
ಕಾರ್ನ್ ಫ್ಲೋರ್
ತುಪ್ಪ
ಹಳದಿ ಬಣ್ಣ
ಸಕ್ಕರೆ – 1 ಕೆ.ಜಿ
ಹಾಲಿನ ಪುಡಿ
ಚೆರಿ

ಮಾಡುವ ವಿಧಾನ

ಮೊದಲು ಒಂದೂವರೆ ಲೀಟರ್ ಹಾಲನ್ನು ಒಲೆ ಮೇಲಿಟ್ಟು ಕುದಿಯಲು ಬಿಡಿ. ಕುದಿಯಲು ಆರಂಭಿಸುವಾಗ ಎರಡು ನಿಂಬೆ ರಸ ಹಿಂಡಿಕೊಂಡು ಸ್ವಲ್ಪ ಸ್ವಲ್ಪವೇ ಹಾಕಿಕೊಳುತ್ತಾ ತಿರುಗಿಸಿಕೊಳ್ಳಿ.

ಹಾಲು ಪಡೆದ ನಂತರ ಅದನ್ನು ಒಂದು ತೆಳು ಬಟ್ಟೆಗೆ ಹಾಕಿ ಚೆನ್ನಾಗಿ ಹಿಂಡಿಕೊಳ್ಳಬೇಕು. ನಂತರ ಈ ಪನೀರ್‌ನಲ್ಲಿ ಇರುವ ಹುಳಿ ಅಂಶ ಹೋಗಬೇಕಾದರೆ ನೀರಿನಿಂದ ತೊಳೆದುಕೊಂಡು ಮತ್ತೆ ಹಿಂಡಿಕೊಳ್ಳಬೇಕು. ನಂತರ ಅದನ್ನು ಒಂದು ಪ್ಲೇಟ್‌ಗೆ ಹಾಕಿ ಪುಡಿ ಪುಡಿ ಮಾಡಿಕೊಳ್ಳಿ.

ನಂತರ ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಕಾರ್ನ್ ಫ್ಲೋರ್, ತುಪ್ಪ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಹಳದಿ ಬಣ್ಣ ಹಾಕಿ ಕಲಸಿಕೊಳ್ಳಿ. ಇದು ಚಪಾತಿ ಹಿಟ್ಟಿನಂತೆ ಆಗುವವರೆಗೂ ಕಲಸಿಕೊಳ್ಳಿ. ನಂತರ ಚಂಪಾಕಲಿಗೆ ಯಾವ ಗಾತ್ರದಲ್ಲಿ ಬೇಕೋ ಆ ರೀತಿ ಸಣ್ಣ ಸಣ್ಣ ಹಿಟ್ಟಿನ ಉಂಡೆ ಮಾಡಿಕೊಳ್ಳಿ. ಹೆಬ್ಬೆರಳಿನ ಆಕಾರದಲ್ಲಿರಲಿ. ಈಗ ಒಲೆ ಒಂದು ಪಾತ್ರೆ ಇಟ್ಟು ಅರ್ಧ ಕೆ.ಜಿ ಸಕ್ಕರೆ ಹಾಗು ನೀರು ಹಾಕಿ ಪಾಕ ಮಾಡಿಕೊಳ್ಳಿ.

ಈ ಪಾಕ ಕುದಿಯಲು ಆರಂಭವಾದಾಗ ಚಂಪಾಕಲಿಯನ್ನ ಒಂದೊಂದಾಗಿ ಪಾಕದಲ್ಲಿ ಬಿಡಿ. ಚೆನ್ನಾಗಿ ಬೇಯಲು ಬಿಡಿ. 10 ನಿಮಿಷದ ವರೆಗೂ ಬೇಯಿಸಿ ಬಳಿಕ ಒಲೆ ಆಫ್ ಮಾಡಿ ಒಂದು ಪಾತ್ರೆ ಮುಚ್ಚಿಡಿ. ಈಗ ಮತ್ತೊಂದು ಪಾತ್ರೆಯಲ್ಲಿ ಕೋವಾ ಮಾಡಿಕೊಳ್ಳಿ. ಇದಕ್ಕಾಗಿ ತುಪ್ಪ, ಸ್ವಲ್ಪ ಹಾಲು, ಹಾಲಿನ ಪುಡಿ ಸಹ ಹಾಕಿ ತಿರುಗಿಸಿಕೊಳ್ಳಿ. ಅದು ಗಟ್ಟಿಯಾಗುವಾಗ ಸಕ್ಕರೆ ಹಾಕಿ ಈ ಮಿಶ್ರಣ ಗಟ್ಟಿಯಾಗುವವರೆಗೂ ತಿರುಗಿಸುತ್ತ ಇರಿ.

ಈ ಮಿಶ್ರಣ ಗಟ್ಟಿಯಾಗಿ ಸಿಹಿ ಉಪ್ಪಿಟ್ಟಿನಂತೆ ಆಗುತ್ತದೆ. ಈಗ ಸಕ್ಕರೆ ಪಾಕದಲ್ಲಿರುವ ಚಂಪಾಕಲಿಯನ್ನು ಒಂದೊಂದಾಗಿ ತೆಗೆದುಕೊಂಡು ಮಧ್ಯದಲ್ಲಿ ಸಣ್ಣದಾಗಿ ಕತ್ತರಿಸಿಕೊಳ್ಳಿ. ಈಗ ಹಾಲಿನಿಂದ ಮಾಡಿಕೊಂಡ ಕೋವಾವನ್ನು ಹಾಕಿಕೊಂಡು ಮೇಲೆ ಚರಿ ಹಣ್ಣು ಇಟ್ಟರೆ ನಿಮ್ಮ ಮುಂದೆ ರುಚಿ ರುಚಿಯ ಚಂಪಾಕಲಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!