ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿನಿತ್ಯ ತಹರೇವಾರಿ ಹನ್ಣಿನ ಜ್ಯೂಸ್ ಕಡಿಯುತ್ತೇವೆ, ಅದರ ಜೊತೆಗೆ ಈ ತರಕಾರಿಗಳ ಜ್ಯೂಸ್ ಕೂಡ ಆರೋಗ್ಯಕ್ಕೆ ಒಲ್ಳೆಯದು, ಯ್ವಚೆ ಕೂಡ ಯೌವ್ವನವಾಗಿರಲು ಸಹಕರಿಸುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಕ್ಯಾರೆಟ್-2, ಬೀಟ್ರೂಟ್-1, ಶುಂಠಿ- ಚಿಕ್ಕ ತುಂಡು, ನಿಂಬೆ ರಸ- 1 ಚಮಚ, ಜೇನುತುಪ್ಪ- 2 ಚಮಚ.
ತಯಾರಿಸುವ ವಿಧಾನ: ಮೊದಲು ಕ್ಯಾರೆಟ್ ಮತ್ತು ಬೀಟ್ರೂಟ್ ಅನ್ನು ತೊಳೆಯಿರಿ. ಈಗ ಕ್ಯಾರೆಟ್ ಮತ್ತು ಬೀಟ್ರೂಟ್ ಅನ್ನು ಸಿಪ್ಪೆ ಮಾಡಿ ಮತ್ತು ತುಂಡುಗಳಾಗಿ ಕತ್ತರಿಸಿ. ನಂತರ ಮಿಕ್ಸಿಂಗ್ ಜಾರ್‌ನಲ್ಲಿ ತುಂಡುಗಳನ್ನು ಹಾಕಿ ಶುಂಠಿ, ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ ಮತ್ತು ಸಾಕಷ್ಟು ನೀರು ಸೇರಿಸಿ. ನಿಧಾನವಾಗಿ ಮಿಕ್ಸಿ ಮಾಡಿ.
ಈಗ ತಿರುಳನ್ನು ಫಿಲ್ಟರ್ ಮಾಡಿ, ಹೀಗೆ ಮಾಡಿದಾಗ ತಿರುಳಿನಲ್ಲಿರುವ ರಸವೆಲ್ಲ ಇಳಿಯುತ್ತದೆ. ಜ್ಯೂಸ್ ಗ್ಲಾಸ್ ನಲ್ಲಿ ಜ್ಯೂಸ್ ತೆಗೆದುಕೊಂಡು ಸರ್ವ್ ಮಾಡಿ.