ಸಾಮಾಗ್ರಿಗಳು
ಗೋಧಿಹಿಟ್ಟು
ಉಪ್ಪು
ನೀರು
ಪನೀರ್
ಖಾರದಪುಡಿ
ಆರಿಗ್ಯಾನೊ
ಟೊಮ್ಯಾಟೊ ಕೆಚಪ್
ಗರಂ ಮಸಾಲಾ
ಕ್ಯಾಪ್ಸಿಕಂ
ಸ್ವೀಟ್ ಕಾರ್ನ್
ಮಾಡುವ ವಿಧಾನ
ಮೊದಲು ಗೋಧಿಹಿಟ್ಟಿಗೆ ಉಪ್ಪು ಹಾಗೂ ನೀರು ಹಾಕಿ ಕಲಸಿ
ನಂತರ ಚಪಾತಿ ರೀತಿ ಲಟ್ಟಿಸಿ ಅರ್ಧಂಬರ್ಧ ಬೇಯಿಸಿ ಇಡಿ
ನಂತರ ಬೌಲ್ಗೆ ತುರಿದ ಪನೀರ್, ಆರಿಗ್ಯಾನೊ, ಖಾರದಪುಡಿ, ಕ್ಯಾಪ್ಸಿಕಂ ಹಾಗೂ ಸ್ವೀಟ್ ಕಾರ್ನ್ ಹಾಕಿ ಮಿಕ್ಸ್ ಮಾಡಿ
ನಂತರ ಚಪಾತಿಗೆ ಟೊಮ್ಯಾಟೊ ಕೆಚಪ್ ಸವರಿ ನಂತರ ಅರ್ಧಕ್ಕೆ ಈ ಎಲ್ಲ ಪದಾರ್ಥ ಹಾಕಿ ಚೀಸ್ ಹಾಕಿ ಮುಚ್ಚಿ
ನಂತರ ಬೆಣ್ಣೆ ತವಾ ಮೇಲೆ ಹಾಕಿ ಚಪಾತಿಯನ್ನು ಸಂಪೂರ್ಣವಾಗಿ ಬೇಯಿಸಿದ್ರೆ ಫ್ರಾಂಕಿ ರೆಡಿ