ಸ್ಟೆಪ್ 1
ಮೊದಲು ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಒಣಮೆಣಸಿನ ಕಾಯಿ, ಕೊತ್ತಂಬರಿ ಕಾಳು, ಜೀರಿಗೆ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ
ಸ್ಟೆಪ್ 2
ನಂತರ ಪ್ಯಾನ್‌ಗೆ ಎಣ್ಣೆ ಈರುಳ್ಳಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಅರಿಶಿಣ, ಕರಿಬೇವು ಹಾಗೂ ಖಾರದಪುಡಿ ಹಾಕಿ ಬಾಡಿಸಿ. ಇದಕ್ಕೆ ಚಿಕನ್ ಮಿಕ್ಸ್ ಮಾಡಿ ಮುಚ್ಚಿ ಬೇಯಿಸಿ. ಚಿಕನ್ ಬೆಂದ ನಂತರ ಹೊರಗೆ ತೆಗೆದು ಮಸಾಲಾ ಹಾಗೇ ಬಿಡಿ.
ಸ್ಟೆಪ್ 3
ಇತ್ತ ನೀರಿಗೆ ಪಲಾವ್ ಎಲೆ ಹಾಕಿ ಕುದಿಯಲು ಇಡಿ
ಸ್ಟೆಪ್ 4
ನಂತರ ಮತ್ತೆ ಪ್ಯಾನ್‌ಗೆ ಎಣ್ಣೆ ಹಸಿಮೆಣಸು ಈರುಳ್ಳಿ ಹಾಕಿ, ಆಗಲೇ ಎತ್ತಿಟ್ಟುಕೊಂಡ ಚಿಕನ್ ಹಾಕಿ, ಮಸಾಲಾ ಪುಡಿ ಉದುರಿಸಿ, ಕೊತ್ತಂಬರಿ ಹಾಕಿ ಡ್ರೈ ಆಗುವವರೆಗೂ ಸಣ್ಣ ಉರಿಯಲ್ಲಿ ಬಾಡಿಸಿ.
ಸ್ಟೆಪ್ 5
ನಂತರ ಕುಕ್ಕರ್‌ಗೆ ಎಣ್ಣೆ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಅಕ್ಕಿ ಹಾಕಿ ಹುರಿಯಿರಿ
ನಂತರ ಮೊದಲು ಚಿಕನ್ ಬೇಯಿಸಿದಾಗ ಉಳಿದ ಮಸಾಲೆ ಇದಕ್ಕೆ ಹಾಕಿ. ನಂತರ ಪಲಾವ್ ಎಲೆಯ ನೀರು ಹಾಕಿ ಕುಕ್ಕರ್ ಮುಚ್ಚಿ
ಕುಕ್ಕರ್ ತೆಗೆದ ನಂತರ ಚಿಕನ್ ಡ್ರೈ ಅದರ ಮೇಲೆ ಹಾಕಿ ಮಿಕ್ಸ್ ಮಾಡಿ, ಐದು ನಿಮಿಷ ಬಿಟ್ಟು ಟೇಸ್ಟಿ ಚಿಕನ್ ಪಲಾವ್ ಸವಿಯಿರಿ