ಜನಪ್ರತಿನಿಧಿಗಳಿಗೆ ಕಾನೂನು ಪದವಿ ಕಡ್ಡಾಯ ಮಾಡಿ: ಬಯ್ಯಾಪುರ

ಹೊಸದಿಗಂತ ವರದಿ ಕೊಪ್ಪಳ:

ಎಂಎಲ್‌ಎ ಮತ್ತು ಎಂಪಿಗಳಿಗೆ ಕಾನೂನು ಪದವಿ ಕಡ್ಡಾಯ ಮಾಡಬೇಕು. ಈ ನಿಟ್ಟಿನಲ್ಲಿ ಸಂವಿಧಾನ ಬದಲಾವಣೆ ಮಾಡಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಸದ್ಯ ಸಂವಿಧಾನ ಪ್ರಕಾರ ಹೆಬ್ಬೆಟ್ಟು ಇದ್ದವರೂ ಸಿಎಂ, ಪಿಎಂ ಆಗಲು ಅವಕಾಶವಿದೆ. ಕಾನೂನು ಜ್ಞಾನ ಇಲ್ಲದವರು ಕಾನೂನು ರಚಿಸುವಂತಾಗಿದೆ. ಅದು ಬದಲಾಗಬೇಕು.

ಕಾನೂನು ಸಚಿವ ಮಾಧುಸ್ವಾಮಿ ಹಲವು ಕಾನೂನು ವಾಪಸ್ ಪಡೆದಿದ್ದಾರೆ. ಸದನದಲ್ಲಿ ಮಸೂದೆ ಮಂಡಿಸಿದ ಅಧ್ಯಕ್ಷರು ಯಾರು ಕಾನೂನು ಪರವಾಗಿ ಇದ್ದೀರಿ ಎಂದಾಗ ನಾವು ಸುಮ್ಮನೆ ಕೈ ಎತ್ತುತ್ತೇವೆ. ಆದರೆ, ಕಾನೂನು ಏನೆಂಬುದು ಗೊತ್ತಿಲ್ಲ. ಆದರೂ ಬಹುಮತ ಇದ್ದವರು ಹೇಳಿದ್ದು ಒಪ್ಪಿತವಾಗುತ್ತದೆ ಎಂದರು. ಇದು ಬದಲಾವಣೆಯಾಗಬೇಕು. ಸದ್ಯ ಇದು ಆಗದಿರಬಹುದು. ಮುಂದೆ ಆಗಬಹುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!