Tuesday, November 25, 2025

FOOD | ಸಿಂಪಲ್ ಆಗಿ ಮಾಡಿ ಲೆಮನ್ ರಸಂ: ನಾಲಗೆಗೂ ರುಚಿ, ಹೊಟ್ಟೆಗೂ ತಂಪು

ಲೆಮನ್ ರಸಂ ಎಂದರೆ ಬೇಗನೆ ತಯಾರಾಗುವ, ಹೊಟ್ಟೆಗೆ ಹಗುರವಾಗಿರುವ ಮತ್ತು ರುಚಿಯಲ್ಲಿ ತಾಜಾತನ ತುಂಬಿರುವ ಒಂದು ಕ್ಲಾಸಿಕ್ ದಕ್ಷಿಣ ಭಾರತೀಯ ರಸಂ. ಜ್ವರ, ಶೀತ ಬಂದಾಗಲೂ ಈ ರಸಂ ದೇಹಕ್ಕೆ ಆರಾಮಕೊಡುತ್ತದೆ.

ಬೇಕಾಗುವ ಸಾಮಗ್ರಿಗಳು:

ತೊಗರಿ ಬೇಳೆ – ½ ಕಪ್
ನೀರು – ಅಗತ್ಯಕ್ಕೆ ತಕ್ಕಷ್ಟು
ಲಿಂಬೆರಸ – 1 ಟೇಬಲ್ ಸ್ಪೂನ್
ಟೊಮ್ಯಾಟೊ – 1
ಹಸಿಮೆಣಸು – 2
ಅರಿಶಿನ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ – ½ ಟೀ ಸ್ಪೂನ್
ಕರಿ ಬೇವಿನ ಎಲೆ – ಕೆಲವು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸಾಸಿವೆ – ½ ಟೀ ಸ್ಪೂನ್
ಒಣ ಮೆಣಸಿನಕಾಯಿ – 1
ಎಣ್ಣೆ/ ತುಪ್ಪ – 1 ಟೀ ಸ್ಪೂನ್

ತಯಾರಿಸುವ ವಿಧಾನ:

ತೊಗರಿ ಬೇಳೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಬೇಯಿಸಿದ ಬೇಳೆ, ಟೊಮ್ಯಾಟೊ, ಹಸಿಮೆಣಸು, ಅರಿಶಿನ, ಉಪ್ಪು ಹಾಗೂ ನೀರನ್ನು ಹಾಕಿ ಕುದಿಯಲು ಬಿಡಿ. ಇದು ಸ್ವಲ್ಪ ಕುದಿದ ಮೇಲೆ ಸ್ಟೌವ್ ಆಫ್ ಮಾಡಿ ಲಿಂಬೆರಸವನ್ನು ಸೇರಿಸಿ ಮಿಕ್ಸ್ ಮಾಡಿ.

ಒಂದು ಪ್ಯಾನ್‌ನಲ್ಲಿ ಎಣ್ಣೆ/ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಒಣ ಮೆಣಸಿನಕಾಯಿ, ಕರಿ ಬೇವಿನ ಎಲೆ ಹಾಕಿ ಒಗ್ಗರಣೆ ಮಾಡಿ ರಸಂಗೆ ಸೇರಿಸಿ. ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಬಹುದು.

error: Content is protected !!