FOOD | ಬಾಯಲ್ಲಿ ನೀರು ತರಿಸುವ ಚೀಸ್‌ ಕಬಾಬ್‌ ಮನೆಯಲ್ಲೇ ಮಾಡಿ, ರೆಸಿಪಿ ಇಲ್ಲಿದೆ..

ಮೊಝ್ಝಾರೆಲ್ಲಾ ಚೀಸ್- 100 ಗ್ರಾಂ (1 ಇಂಚಿನ ತುಂಡುಗಳಾಗಿ ಕತ್ತರಿಸಿದ್ದು)

ಚಿಕನ್ – 300 ಗ್ರಾಂ (ಕೀಮಾ ರೀತಿ ಕತ್ತರಿಸಿಕೊಂಡಿದ್ದು)

ಒತ್ತು ಶಾವಿಗೆ- 150 ಗ್ರಾಂ

ಶುಂಠಿ-ಬೆಳ್ಳುಳ್ಳಿ- ಸಣ್ಣಗೆ ಕತ್ತರಿಸಿದ್ದು 1 ಚಮಚ

ಹಸಿರು ಮೆಣಸಿನಕಾಯಿ ಪೇಸ್ಟ್- 1 ಚಮಚ

ಪುದೀನಾ- ಸ್ವಲ್ಪ (ಸಣ್ಣಗೆ ಕತ್ತರಿಸಿದ್ದು)

ಈರುಳ್ಳಿ- ಸಣ್ಣಗೆ ಕತ್ತರಿಸಿದ್ದು 1

ಅಚ್ಚ ಖಾರದ ಪುಡಿ- ಅರ್ಧ ಚಮಚ

ಗರಂ ಮಸಾಲಾ- ಅರ್ಧ ಚಮಚ

ಮೊಟ್ಟೆ- 1

ಒಂದು ಬಟ್ಟಲಿನಲ್ಲಿ ಕತ್ತರಿಸಿದ ಕೋಳಿ ಮಾಂಸವನ್ನು ತೆಗೆದುಕೊಂಡು, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿಗಳು, ಪುದೀನ ಮತ್ತು ಈರುಳ್ಳಿ, ಉಪ್ಪು, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ ಹಾಗೂ ಮೊಟ್ಟೆ ಹಳದಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, 10-15 ನಿಮಿಷಗಳ ಕಾಲ ನೆನೆಯಲು ಬಿಡಿ.

ಶಾವಿಗೆಯನ್ನು ತರಿತರಿಯಾಗಿ ಪುಡಿಮಾಡಿ, ತಟ್ಟೆಗೆ ಹಾಕಿಟ್ಟುಕೊಳ್ಳಿ. ಸ್ಟೀಮರ್‌ ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿ ಮಾಡಿ.

ಮೊಝ್ಝಾರೆಲ್ಲಾ ಚೀಸ್ ನ್ನು ಸ್ಟಿಕ್ ನಲ್ಲಿ ಚುಚ್ಚಿ ಇದಕ್ಕೆ ಮಸಾಲೆ ಮಿಶ್ರಿತ ಮಾಂಸವನ್ನು ಅಂಟಿಸಿ. ಈ ವೇಳೆ ಮೊಟ್ಟೆಯ ಬಿಳಿಯ ಭಾಗವನ್ನು ಬಳಕೆ ಮಾಡಬಹುದು. ಇದನ್ನು ನಂತರ ಶಾವಿಗೆಯಲ್ಲಿ ಹೊರಳಿಸಿ, ಸ್ಟೀಮ್ ನಲ್ಲಿ 5-10 ನಿಮಿಷ ಬೇಯಿಸಿಕೊಳ್ಳಿ.

ಕಡಾಯಿಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಸ್ಟೀಮ್ ನಲ್ಲಿ ಬೇಯಿಸಿದ ಸ್ಟಿಕ್ ಗಳು ಸ್ವಲ್ಪ ತಣ್ಣಗಾದ ಬಳಿಕ ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿ. ಇದೀಗ ರುಚಿಕರವಾದ ಚೀಸ್ ಕಬಾಬ್‌ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!