FOOD | ರೆಸ್ಟೋರೆಂಟ್‌ಗಿಂತ ರುಚಿಯಾದ ಪನೀರ್‌ ಬಟರ್‌ ಮಸಾಲಾ ಮನೆಯಲ್ಲೇ ಮಾಡಿ, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಬೆಳ್ಳುಳ್ಳಿ
ಶುಂಠಿ
ಚಕ್ಕೆ
ಲವಂಗ
ಏಲಕ್ಕಿ
ಗೋಡಂಬಿ
ಒಣಮೆಣಸು
ಪನೀರ್‌
ಫ್ರೆಶ್‌ ಕ್ರೀಂ
ಬೆಣ್ಣೆ

ಹಂತ 1
ಮೊದಲು ಪ್ಯಾನ್‌ಗೆ ಬೆಣ್ಣೆ ಹಾಕಿ, ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಒಣಮೆಣಸು ಹಾಕಿ ಬಾಡಿಸಿ, ನಂತರ ಈರುಳ್ಳಿ ಹಾಕಿ, ಗೋಡಂಬಿ ಹಾಕಿ ಟೊಮ್ಯಾಟೊ ಹಾಕಿ ಮೆತ್ತಗಾಗುವವರೆಗೂ ಬಾಡಿಸಿ ತಣ್ಣಗಾಗಲು ಬಿಡಿ. ನಂತರ ಮಿಕ್ಸಿಯಲ್ಲಿ ಫೈನ್‌ ಪೇಸ್ಟ್‌ ಮಾಡಿಕೊಳ್ಳಿ

ಹಂತ 2
ಅದೇ ಪ್ಯಾನ್‌ಗೆ ಬೆಣ್ಣೆ ಹಾಕಿ, ಪನೀರ್‌ ಹಾಕಿ, ಸ್ವಲ್ಪ ಉಪ್ಪು ಹಾಗೂ ಖಾರದಪುಡಿ ಹಾಕಿ ಒಂದೆರಡು ನಿಮಿಷ ಬಿಸಿ ಮಾಡಿ ಎತ್ತಿಟ್ಟುಕೊಳ್ಳಿ

ಹಂತ 3
ಪ್ಯಾನ್‌ಗೆ ಬೆಣ್ಣೆ ಹಾಕಿ, ಮಿಕ್ಸಿಗೆ ಹಾಕಿದ್ದ ಮಸಾಲಾ ಹಾಕಿ, ಅದು ಸ್ವಲ್ಪ ಬಿಸಿಯಾದ ನಂತರ ಪನೀರ್‌ ಹಾಕಿ, ಎರಡೂ ಕುದ್ದ ನಂತರ ಫ್ರೆಶ್‌ ಕ್ರೀಂ ಹಾಕಿ ಆಫ್‌ ಮಾಡಿದ್ರೆ ಪನೀರ್‌ ಬಟರ್‌ ಮಸಾಲಾ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!