ಟೇಸ್ಟಿ ಪನೀರ್ ಬಟರ್ ಮಸಾಲಾ ಹೀಗೆ ಮಾಡಿ..
ಬಾಣಲೆಗೆ ಬೆಣ್ಣೆ ಈರುಳ್ಳಿ, ಹಸಿಮೆಣಸು, ಒಣಮೆಣಸು, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ ಹಾಗೂ ಗೋಡಂಬಿ ಹಾಕಿ ಹುರಿದುಕೊಳ್ಳಿ.
ನಂತರ ಇದಕ್ಕೆ ಟೊಮ್ಯಾಟೊ ಹಾಕಿ ಬಾಡಿಸಿ, ತಣ್ಣಗಾದ ನಂತರ ರುಬ್ಬಿ ಇಟ್ಟುಕೊಳ್ಳಿ
ನಂತರ ಬಟರ್ ಹಾಕಿ ಲೈಟ್ ಆಗಿ ಪನೀರ್ ರೋಸ್ಟ್ ಮಾಡಿ ತೆಗೆದಿಟ್ಟುಕೊಳ್ಳಿ.
ನಂತರ ಬಾಣಲೆಗೆ ರುಬ್ಬಿದ ಮಸಾಲಾ ಉಪ್ಪು, ಅರಿಶಿಣ ಹಾಕಿ ಕುದಿಸಿ ನಂತರ ಪನೀರ್ ಹಾಕಿ ಬೇಯಿಸಿದ್ರೆ ಬಟರ್ ಮಸಾಲಾ ರೆಡಿ