ಪಂಜಾಬಿ ಡಾಬಾಗಳಲ್ಲಿ ದೊರೆಯುವ ಮಟರ್ ಪನ್ನೀರ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು ಎಂಬುದು ಬಹುಮಂದಿ ಗೊತ್ತಿಲ್ಲ. ಅದರಲ್ಲೂ ಬಟಾಣಿ ಮತ್ತು ಪನ್ನೀರ್ ನಿಂದ ತಯಾರಾಗುವ ಮಟರ್ ಪನ್ನೀರ್ ಬಹುಜನಪ್ರಿಯ. ಮನೆಮಂದಿಯ ಬಾಯಲ್ಲಿ ನೀರು ತರಿಸುವ ಈ ಪಾಕವಿಧಾನ ಈಗ ನಿಮಗಾಗಿ…
ಬೇಕಾಗುವ ಸಾಮಗ್ರಿಗಳು:
ಪನ್ನೀರ್ – 250 ಗ್ರಾಂ
ಹಸಿ ಬಟಾಣಿ – 2 ಕಪ್
ತುಪ್ಪ – 4 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 3 ಚಮಚ
ಈರುಳ್ಳಿ – 1 ಕಪ್
ಟಮೋಟೊ – 2 ಕಪ್
ಅರಿಶಿಣ – 1 ಚಮಚ
ಖಾರದಪುಡಿ – 2 ಚಮಚ
ಗರಂ ಮಸಾಲಾ – ಅರ್ಧ ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಹಾಲಿನ ಕೆನೆ – 3 ಚಮಚ
ಮಾಡುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಕತ್ತರಿಸಿದ ಪನ್ನೀರ್ ತುಂಡುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿದು ಪಕ್ಕಕ್ಕಿಡಿ. ಬಳಿಕ ಅದೇ ಬಾಣಲೆಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಲವೇ ಕ್ಷಣ ಬೇಯಿಸಿ. ತಕ್ಷಣ ಈರುಳ್ಳಿ ಸೇರಿಸಿ ಬಾಡಿಸಿ, ನಂತರ ಟಮೋಟೊ ಹಾಕಿ ಚೆನ್ನಾಗಿ ಫ್ರೈ ಮಾಡಿ.
ಇದಕ್ಕೆ ಅರಿಶಿಣ, ಖಾರದಪುಡಿ ಹಾಗೂ ಗರಂ ಮಸಾಲಾ ಸೇರಿಸಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ಈ ಮಿಶ್ರಣದೊಳಗೆ ಬಟಾಣಿ ಹಾಕಿ 3 ನಿಮಿಷ ಬೇಯಿಸಿ. ಈಗ ಕರಿದ ಪನ್ನೀರ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಬಾಣಲೆಗೆ ಮುಚ್ಚಳ ಹಾಕಿ ಸುಮಾರು 10 ನಿಮಿಷದವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
ಕೊನೆಗೆ ಕೆಳಗಿಳಿಸಿ ಹಾಲಿನ ಕೆನೆ ಸೇರಿಸಿದರೆ ರೆಸ್ಟೋರೆಂಟ್ ಶೈಲಿಯ ಪಂಜಾಬಿ ಮಟರ್ ಪನ್ನೀರ್ ರೆಡಿ.