ಕಿತ್ತಳೆ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕಿತ್ತಳೆ ಹಣ್ಣು ತಿಂದು ಸಿಪ್ಪೆಯನ್ನು ತೆಪ್ಪಗೆ ತಿಪ್ಪೆಗೆಸೆಯುತ್ತೇವೆ. ಆದ್ರೆ ಈ ವಿಚಾರ ತಿಳಿದುಕೊಂಡರೆ ಖಂಡಿತಾ ನೀವು ಕಿತ್ತಳೆ ಸಿಪ್ಪೆಯನ್ನು ಎಸೆಯುವುದೇ ಇಲ್ಲ!. ಕಿತ್ತಳೆ ಸಿಪ್ಪೆಯಿಂದ ರುಚಿ ರುಚಿಯಾದ ಗೊಜ್ಜು ಮಾಡಬಹುದು. ಅದು ಹೇಗೆ ಗೊತ್ತೇ?
ಬೇಕಾಗುವ ಸಾಮಾಗ್ರಿ: ಕಿತ್ತಳೆ ಹಣ್ಣಿನ ಸಿಪ್ಪೆ 2, ಶುದ್ಧ ತೆಂಗಿನೆಣ್ಣೆ , ಒಗ್ಗರಣೆ ವಸ್ತುಗಳು, ಹುಣಸೆ ಹುಳಿ ರಸ ಒಂದು ಕಪ್, ಒಂದು ಲಿಂಬೆ ಗಾತ್ರದ್ದು, ಬೆಳ್ಳುಳ್ಳಿ ಎಸಳು 10
ಮಾಡುವ ವಿಧಾನ: ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆ ಸಿದ್ಧಮಾಡಿಕೊಳ್ಳಿ. ಒಗ್ಗರಣೆಯ ಜೊತೆಗೆ ಹೆಚ್ಚಿಟ್ಟುಕೊಂಡ ಕಿತ್ತಳೆ ಸಿಪ್ಪೆ ಸೇರಿಸಿ ಫ್ರೈಮಾಡಿ. ಚೆನ್ನಾಗಿ ಬಾಡುತ್ತಿದ್ದಂತೆಯೇ ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಫ್ರೈಮಾಡಿ. ಚೆನ್ನಾಗಿ ಫ್ರೈ ಆಗಿ ಪರಿಮಳ ಬರುತ್ತಿದ್ದಂತೆಯೇ 3 ಕಪ್ ನೀರು ಸೇರಿಸಿ ಕುದಿಸಿ. ಹುಣಸೆ ಹಣ್ಣಿನ ರಸ ಸೇರಿಸಿ ಕುದಿಸಿ. ನಂತರ ಬೆಲ್ಲ ಹಾಕಿ. ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ.
ರುಚಿ ರುಚಿಯಾದ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ರೆಡಿ.