ಸಾಮಾಗ್ರಿಗಳು
ಶೇಂಗಾ ಬೀಜ – 1 ಕಪ್
ಜೇನುತುಪ್ಪ – 1 ಚಮಚ
ಉಪ್ಪು – ಒಂದು ಚಿಟಿಕೆ
ಕಡಲೆಕಾಯಿ ಎಣ್ಣೆ – 1 ಚಮಚ
ಮಾಡುವ ವಿಧಾನ
ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಶೇಂಗಾ ಬೀಜ ಹಾಕಿಕೊಂಡು ಕೆಂಪಗಾಗುವರೆಗೆ ಹುರಿದುಕೊಳ್ಳಿ. ಬಳಿಕ ತಣ್ಣಾಗಗಲು ಬಿಡಿ.
ಈಗ ಹುರಿದ ಶೇಂಗಾ ಬೀಜದ ಸಿಪ್ಪೆ ಹೋಗುವವರೆಗೆ ಚನ್ನಾಗಿ ಉಜ್ಜಿಕೊಂಡು ಒಂದು ಬೌಲ್‌ನಲ್ಲಿ ಹಾಕಿಕೊಳ್ಳಿ. ಬಳಿಕ ಒಂದು ಮಿಕ್ಸಿ ಜಾರಿಗೆ ಶೇಂಗಾ ಬೀಜವನ್ನು ಹಾಕಿಕೊಂಡು ಚನ್ನಾಗಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
ನಂತರ ಇದಕ್ಕೆ 1 ಚಮಚ ಜೇನುತುಪ್ಪವನ್ನು ಹಾಕಿಕೊಂಡು ಅದಕ್ಕೆ ಒಂದು ಚಿಟಿಕೆ ಉಪ್ಪನ್ನು ಹಾಕಿಕೊಳ್ಳಿ. ಬಳಿಕ ಮತ್ತೊಂದು ಬಾರಿ ರುಬ್ಬಿಕೊಳ್ಳಿ.
ಈಗ ಈ ಮಿಶ್ರಣಕ್ಕೆ ಒಂದು ಚಮಚ ಕಡಲೆಕಾಯಿ ಎಣ್ಣೆ ಹಾಕಿಕೊಳ್ಳಿ. ಬಳಿಕ ಇನ್ನೊಂದು ಬಾರಿ ರುಬ್ಬಿಕೊಳ್ಳಿ.
ಮಿಕ್ಸಿ ಜಾರಿನಲ್ಲಿದ್ದ ಮಿಶ್ರಣವನ್ನು ಒಂದು ಬೌಲ್‌ಗೆ ತೆಗೆದಿಟ್ಟುಕೊಳ್ಳಿ. ಈ ಪೀನಟ್ ಬಟರ್ ಅನ್ನು ಚಪಾತಿ, ಬ್ರೆಡ್ ಅಥವಾ ನಿಮಗಿಷ್ಟವಾದ ಆಹಾರದೊಂದಿಗೆ ಸೇವಿಸಬಹುದು.