Thursday, November 6, 2025

LIFE | ದೀರ್ಘಾಯುಷ್ಯಕ್ಕಾಗಿ ದಿನನಿತ್ಯದ ಜೀವನದಲ್ಲಿ ಈ ಬದಲಾವಣೆ ಮಾಡಿಕೊಳ್ಳಿ! ಎಲ್ಲ ಒಳ್ಳೆದಾಗುತ್ತೆ

ನಾವು 100 ವರ್ಷ ಜೀವಿಸಲು ಸಾಧ್ಯವಿಲ್ಲದಿದ್ದರೂ, ಆರೋಗ್ಯಕರ ಮತ್ತು ದೀರ್ಘ ಜೀವನವನ್ನು ಕಟ್ಟಿಕೊಳ್ಳುವುದು ನಮ್ಮ ಕೈಯಲ್ಲಿದೆ. ಇತ್ತೀಚಿನ ಅಧ್ಯಯನವು ಹೇಳುವುದೇನಂದರೆ — ನಿಮ್ಮ ದಿನನಿತ್ಯದ ಜೀವನದಲ್ಲಿ ಕೆಲವೇ ಸಣ್ಣ ಬದಲಾವಣೆಗಳನ್ನು ಮಾಡಿದರೆ, ನಿಮ್ಮ ಜೀವಿತಾವಧಿ ಸರಾಸರಿ 5.5 ವರ್ಷಗಳವರೆಗೆ ಹೆಚ್ಚಬಹುದು ಎಂದು!

ಆನುವಂಶಿಕವಾಗಿ ಚಿಕ್ಕ ವಯಸ್ಸಿನಲ್ಲೇ ಸಾಯುವ ಅಪಾಯದಲ್ಲಿದ್ದರೂ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದವರು, ಅಪಾಯ ಕಡಿಮೆ ಇದ್ದರೂ ಅನಾರೋಗ್ಯಕರ ಜೀವನಶೈಲಿ ನಡೆಸಿದವರಿಗಿಂತ ಸರಾಸರಿ 5.5 ವರ್ಷಗಳಷ್ಟು ಹೆಚ್ಚು ಬದುಕುವ ಸಾಧ್ಯತೆ ಇದೆ

  • ಧೂಮಪಾನ ಮಾಡದಿರಿ: ಧೂಮಪಾನವು ಶ್ವಾಸಕೋಶ ಕ್ಯಾನ್ಸರ್‌ ಮಾತ್ರವಲ್ಲ, ಹೃದ್ರೋಗ, ಪಾರ್ಶ್ವವಾಯು ಮತ್ತು ಅನೇಕ ಜೀವಪಾಯದ ಕಾಯಿಲೆಗಳಿಗೂ ಪ್ರಮುಖ ಕಾರಣ. ಧೂಮಪಾನ ನಿಲ್ಲಿಸುವುದರಿಂದ ತಕ್ಷಣದ ಮತ್ತು ದೀರ್ಘಾವಧಿಯ ಆರೋಗ್ಯ ಲಾಭ ದೊರೆಯುತ್ತದೆ.
  • ಆರೋಗ್ಯಕರ ಆಹಾರ ಸೇವನೆ: ಹಣ್ಣು, ತರಕಾರಿ, ಸಂಪೂರ್ಣ ಧಾನ್ಯಗಳು, ಮತ್ತು ಆರೋಗ್ಯಕರ ಕೊಬ್ಬನ್ನು ಒಳಗೊಂಡ ಆಹಾರವು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಸಮತೋಲಿತ ಆಹಾರವು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
  • ದೈಹಿಕ ಚಟುವಟಿಕೆ: ನಿಯಮಿತ ವ್ಯಾಯಾಮವು ತೂಕ ನಿಯಂತ್ರಣದ ಜೊತೆಗೆ ಹೃದಯ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಆಲ್ಕೋಹಾಲ್ ಕಡಿಮೆ ಸೇವನೆ: ಅತಿಯಾದ ಮದ್ಯಪಾನವು ಲಿವರ್ ಹಾಗೂ ಹೃದಯಕ್ಕೆ ಹಾನಿಕಾರಕ. ಆದರೆ ಕಡಿಮೆ ಪ್ರಮಾಣದಲ್ಲಿ, ನಿಯಮಿತವಾಗಿ ನಿಯಂತ್ರಿತ ಸೇವನೆಯು ಕೆಲವು ಸಂದರ್ಭಗಳಲ್ಲಿ ದೇಹದ ರಕ್ತಸಂಚಾರಕ್ಕೆ ಸಹಾಯಕವಾಗಬಹುದು.
error: Content is protected !!