ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಸ್ಟ್ ಬೆಂಚ್ ಸ್ಟೂಡೆಂಟ್- ಫಸ್ಟ್ ಬೆಂಚ್ ಸ್ಟುಡೆಂಟ್ ಅನ್ನೋದು ಬರೀ ಸಿಟ್ಟಿಂಗ್ ಅರೇಂಜ್‌ಮೆಂಟ್ ಅಷ್ಟೇ ಅಲ್ಲ. ಮಕ್ಕಳ ವಿದ್ಯಾಭ್ಯಾಸದ ಮೇಲೆ ಅವರನ್ನು ಡಿವೈಡ್ ಮಾಡುವ ವಿಧಾನವೆಂದೂ ಹೇಳಲಾಗಿದೆ.
ಆದರೆ ಈ ವಿಧಾನ ಇನ್ಮುಂದೆ ಬದಲಾಗುವ ಸಾಧ್ಯತೆ ಇದೆ. ಟೀಚರ್ಸ್ ಪಾಠ ಮಾಡುವಾಗ ಮಕ್ಕಳು ಆಟ ಆಡುವುದು, ಕದ್ದು ತಿನ್ನುವುದು ಮಾಡುತ್ತಿದ್ದರು. ಆದರೆ ಇನ್ನುಮುಂದೆ ಹಾಗೆ ಮಾಡಲು ಸಾಧ್ಯವಿಲ್ಲ. ಇದಕ್ಕೆಲ್ಲ ಯು ಶೇಪ್‌ನ ಸೀಟಿಂಗ್ ಅರೇಂಜ್‌ಮೆಂಟ್ ಕಾರಣವಾಗಿದೆ.
ಈಗಾಗಲೇ ಕೇರಳದಲ್ಲಿನ ಶಾಲೆಗಳಲ್ಲಿ ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದೀಗ ಇದೇ ಮಾದರಿಯನ್ನು ಕರ್ನಾಟಕದ ಶಾಲೆಗಳಲ್ಲಿಯೂ ಜಾರಿ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಈ ಕುರಿತಾಗಿ ಮಕ್ಕಳ ಹಕ್ಕುಗಳ ಹೋರಾಟಗಾರರು ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕೇರಳದಲ್ಲಿನ ಶಾಲೆಗಳಲ್ಲಿ ಲಾಸ್ಟ್ ಬೆಂಚ್ ಹಾಗೂ ಫಸ್ಟ್ ಬೆಂಚ್ ಎಂಬ ಆಸನದ ವ್ಯವಸ್ಥೆಗೆ ಬದಲಾವಣೆ ತರಲಾಗಿದೆ. ಇದೇ ಮಾದರಿಯನ್ನ ನಮ್ಮ ಶಾಲೆಗಳಲ್ಲಿಯೂ ಜಾರಿ ಮಾಡುವಂತೆ ಮಕ್ಕಳ ಹಕ್ಕುಗಳ ಆಯೋಗ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರ ಬರೆದಿದ್ದು, ರಾಜ್ಯದ ಪ್ರತಿ ಶಾಲೆಯಲ್ಲೂ ವಿದ್ಯಾರ್ಥಿಗಳು ಅರ್ಧ ವೃತ್ತಕಾರದಲ್ಲಿ ಕುಳಿತು ಶಿಕ್ಷಣ ಪಡೆಯುವುದನ್ನು ಜಾರಿ ಮಾಡಲು ಮನವಿ ಮಾಡಿದೆ.
ಈ ಮನವಿಗೆ ಸಚಿವರು ಸ್ಪಂದಿಸಿ ಒಕೆ ಹೇಳಿದರೆ ಇನ್ಮುಂದೆ ನಮ್ಮ ರಾಜ್ಯದಲ್ಲಿಯೂ ಯು ಸಿಟಿಂಗ್ ಅರೇಂಜ್‌ಮೆಂಟ್ ಜಾರಿಗೆ ಬರಲಿದೆ.