ಕ್ಯಾಪ್ಸಿಕಂ ಅಂದರೆ ಎಲ್ಲರಿಗೂ ಗೊತ್ತೇ ಇದೆ ಹಸಿರು ಮೆಣಸಿನಕಾಯಿ. ಆದರೆ ಅದನ್ನ ಹೆಚ್ಚಾಗಿ ಸಾಂಬಾರ್ ಜೊತೆ ಸೇರಿಸಿ ಅಡುಗೆ ಮಾಡುತ್ತಾರೆ. ಆದ್ರೆ ಇವತ್ತು ನಾವು ಕ್ಯಾಪ್ಸಿಕಂ ಮಸಾಲ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಸಾಮಗ್ರಿಗಳು:
ಮೂರು ಬಣ್ಣದ ಕ್ಯಾಪ್ಸಿಕಂ – 1 ಕಪ್ (ದಪ್ಪಗೆ ತುಂಡು ಮಾಡಿದ್ದು)
ಈರುಳ್ಳಿ -1
ಟೊಮೆಟೊ – 1/4 ಕಪ್
ಕೆಂಪು ಮೆಣಸಿನ ಪುಡಿ – 1/2 ಟೀಸ್ಪೂನ್.
ಕಸೂರಿ ಮೇಥಿ – 1/2 ಟೀಸ್ಪೂನ್
ಜೀರಿಗೆ – 1/4 ಟೀಸ್ಪೂನ್
1 ಹಸಿರು ಮೆಣಸಿನಕಾಯಿ
ಪುಡಿಮಾಡಿದ ಶುಂಠಿ – 1/4 ಟೀಸ್ಪೂನ್
ಗರಂ ಮಸಾಲ ಪುಡಿ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – 2 ಚಮಚ
ಮಸಾಲ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಕಡಲೆಕಾಯಿ – 1 1/2 ಚಮಚ.
ಒಣ ತೆಂಗಿನಕಾಯಿ – 1 1/2 ಚಮಚ.
ಬಿಳಿ ಎಳ್ಳು – 1 ಟೀಸ್ಪೂನ್.
ಕೊತ್ತಂಬರಿ ಬೀಜಗಳು – 1 1/2 ಟೀಸ್ಪೂನ್.
ಜೀರಿಗೆ – 1/2 ಟೀಸ್ಪೂನ್.
ಮಾಡುವ ವಿಧಾನ:
ಮಸಾಲಾ ಪುಡಿ ತಯಾರಿಸಲು ಬೇಕಾದ ಪದಾರ್ಥಗಳನ್ನು ಹುರಿದು ತಣ್ಣಗಾಗಿಸಿ ನುಣ್ಣಗೆ ಪುಡಿ ಮಾಡಿ.
ಈಗ ಒಂದು ಪ್ಯಾನ್ ನಲ್ಲಿ ಎಣ್ಣೆ ಹಾಕಿ, ಬಿಸಿಯಾದಾಗ ಈರುಳ್ಳಿ ಹಾಕಿ ಸ್ವಲ್ಪ ಹುರಿದು ಪಕ್ಕಕ್ಕೆ ಎತ್ತಿಡಿ. ಅದೇ ಪ್ಯಾನ್‌ಗೆ ಕ್ಯಾಪ್ಸಿಕಂ ಸೇರಿಸಿಸ್ವಲ್ಪ ಹುರಿದು ಪಕ್ಕಕ್ಕೆ ಎತ್ತಿಡಿ.
ಈಗ ಅದೇ ಎಣ್ಣೆಗೆ ಜೀರಿಗೆ, ಪುಡಿಮಾಡಿದ ಶುಂಠಿ, ಹಸಿ ಮೆಣಸಿನಕಾಯಿ, ಟೊಮೆಟೊ ಸೇರಿಸಿ ಚೆನ್ನಾಗಿ ಬೇಯುವವರೆಗೆ ಬೇಯಿಸಿ. ಈಗ ತಯಾರಿಸಿದ ಪುಡಿ, ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹುರಿಯಿರಿ. ನಂತರ ಗ್ರೇವಿಯದಪ್ಪ ಬರುವಷ್ಟು ನೀರು ಸೇರಿಸಿ ಬೇಯಿಸಿ. ಈಗ ಫ್ರೈ ಮಾಡಿರುವ ಈರುಳ್ಳಿ ಮತ್ತು ಕ್ಯಾಪ್ಸಿಕಂ ಸೇರಿಸಿ, ಪುಡಿಮಾಡಿದ ಕಸೂರಿ ಮೇಥಿ, ಗರಂ ಮಸಾಲ ಪುಡಿ ಸೇರಿಸಿ 4-5 ನಿಮಿಷ ಕುದಿಸಿದರೆ ಕ್ಯಾಪ್ಸಿಕಂ ಮಸಾಲ ರೆಡಿ.