CINE | ಫಸ್ಟ್‌ ಟೈಮ್‌ ಅರ್ಜುನ್‌ ಕಪೂರ್‌ ಜೊತೆಗಿನ ಬ್ರೇಕಪ್‌ ಬಗ್ಗೆ ಮೌನ ಮುರಿದ ಮಲೈಕಾ ಅರೋರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ ಹಾಟೆಸ್ಟ್‌ ಕಪಲ್‌ ಮಲೈಕಾ ಅರೋರ ಹಾಗೂ ಅರ್ಜುನ್‌ ಕಪೂರ್‌ ಬ್ರೇಕಪ್‌ ಮಾಡಿಕೊಂಡಿದ್ದಾರೆ. ಬ್ರೇಕಪ್‌ ಫೇಸ್‌ನಲ್ಲಿರುವ ಮಲ್ಲಿಕಾಗೆ ಸಾಕಷ್ಟು ಟೀಕೆಗಳು ಎದುರಾಗಿದ್ದು, ಈ ಬಾರಿ ಖಡಕ್‌ ಆಗಿ ಎಲ್ಲದಕ್ಕೂ ಉತ್ತರ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಲೈಕಾ ಮೊದಲ ಬಾರಿಗೆ ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದಿದ್ದಾರೆ. ನಾನು ತೆಗೆದುಕೊಂಡಿರುವ ನಿರ್ಧಾರಕ್ಕೆ ಯಾವುದೇ ವಿಷಾದವಿಲ್ಲದೇ ಬದುಕುತ್ತೇನೆ ಹೊರತು ಕೊರಗುವುದಿಲ್ಲ. ಇಂದು ಏನಾದರೂ ಕಲಿತಿದ್ದೀನಿ ಎಂದಾದರೆ ಅದಕ್ಕೆ ಜೀವನದುದ್ದಕ್ಕೂ ನಾನು ಪಡೆದ ಅನುಭವಗಳೇ ಕಾರಣ. ಇದೆಲ್ಲದರಿಂದಲೇ ಇಂದು ಒಂದೊಳ್ಳೆಯ ಜೀವನವನ್ನು ರೂಪಿಸಿಕೊಂಡಿದ್ದೇನೆ ಎಂದಿದ್ದಾರೆ.

ಇನ್ನೂ ನಾನು ನೋವಿನಿಂದ ಹೊರಬರಲು ಕರೀನಾ ಕಪೂರ್ ಖಾನ್, ಕರೀಷ್ಮಾ ಕಪೂರ್ ಮತ್ತು ಸಹೋದರಿ ಅಮೃತಾ ಅರೋರಾ ಅವರೆಲ್ಲರ ಪಾತ್ರ ಸಾಕಷ್ಟಿದೆ. ಅವರಿಲ್ಲದೆ ನಾನಿಲ್ಲ. ಇಲ್ಲಿಯವರೆಗೂ ನಾನು ಕೈಗೊಂಡ ನಿರ್ಧಾರ ನನ್ನ ಜೀವನವನ್ನು ಉತ್ತಮವಾಗಿ ರೂಪಿಸಿದೆ. ಈ ವಿಷಯದಲ್ಲಿ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಟೀಕಿಸುವವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!