ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ಆರ್. ಸುಬ್ಬಲಕ್ಷ್ಮಿ (87) ಗುರುವಾರ ರಾತ್ರಿ ತಿರುವನಂತರಪುರಂ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಖ್ಯಾತರಾಗಿದ್ದ ಅವರು, ಕರ್ನಾಟಕ ಸಂಗೀತ, ವರ್ಣಚಿತ್ರ ಕಲೆಯಲ್ಲಿಯೂ ಗುರುತಿಸಿಕೊಂಡಿದ್ದರು. ಸುಬ್ಬಲಕ್ಷ್ಮಿ ಅವರು ವಿವಿಧ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದು, ಕಲ್ಯಾಣರಾಮನ್ (2002), ಪಾಂಡಿಪ್ಪಾ (2005) ಮತ್ತು ನಂದನಂ (2002) ಸಿನಿಮಾಗಳ ಮೂಲಕ ಹೆಚ್ಚು ಜನಪ್ರಿಯರಾದರು.
ದಿವಂಗತ ಕಲ್ಯಾಣ್ ಕೃಷ್ಣನ್ ಅವರ ಪತ್ನಿಯಾಗಿರುವ ಸುಬ್ಬಲಕ್ಷ್ಮೀ ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.
ಆರ್. ಸುಬ್ಬಲಕ್ಷ್ಮಿ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಲಯಾಳಂ ನಟ ದಲೀಪ್ ಸೇರಿದಂತೆ ನಾಡಿನ, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.