ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದಲ್ಲಿ ರಾಜ್ ಬಿ. ಶೆಟ್ಟಿ ನಿರ್ಮಾಣ ಮಾಡಿದ, ಜೆಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾ ಸೂಪರ್ ಹಿಟ್ ಆಗಿದೆ.
ಇತ್ತೀಚಿಗಿನ ವರ್ಷಗಳಲ್ಲಿ ಕನ್ನಡದ ಯಾವ ಕಡಿಮೆ ಬಜೆಟ್ನ ಚಿತ್ರವೂ ಇಷ್ಟು ದೊಡ್ಡ ಮಟ್ಟದ ಬುಕಿಂಗ್ನ ಕಂಡಿರಲಿಲ್ಲ ಅನ್ನೋದು ವಿಶೇಷ. ರಂಗಭೂಮಿ ಪ್ರತಿಭೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.
ಈ ಚಿತ್ರ ಈಗಾಗಲೇ ಮಲಯಾಳಂನಲ್ಲಿ ರಿಲೀಸ್ ಆಗಲು ರೆಡಿ ಆಗಿದೆ. ಇದರ ಜೊತೆಗೆ ತೆಲುಗಿನಲ್ಲೂ ಸಿನಿಮಾಗೆ ಬೇಡಿಕೆ ಬಂದಿದ್ದು, ನಾಲ್ಕೈದು ದೊಡ್ಡ ಸಂಸ್ಥೆಗಳು ಸಿನಿಮಾ ಹಕ್ಕು ಪಡೆಯಲು ಸ್ಪರ್ಧೆಗೆ ಇಳಿದಿವೆ.ಈ ವಾರ ‘ಸು ಫ್ರಮ್ ಸೋ’ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಕಾಣಲಿದೆ. ಖ್ಯಾತ ಮಲಯಾಳಂ ಹೀರೋ ಫಹಾದ್ ಫಾಸಿಲ್ ಅವರು ಈ ಚಿತ್ರವನ್ನು ಕೇರಳದಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಮಲಯಾಳಂ ಪ್ರೇಕ್ಷಕರನ್ನು ರಂಜಿಸಲು ಸಿನಿಮಾ ರೆಡಿ ಆಗಿದೆ.
‘ಸು ಫ್ರಮ್ ಸೋ’ ಚಿತ್ರದ ತೆಲುಗು ಡಬ್ಬಿಂಗ್ ಹಕ್ಕಿಗೆ ಬೇಡಿಕೆ ಬಂದಿದೆ. ಕೆಲವು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಈ ಚಿತ್ರದ ಡಬ್ಬಿಂಗ್ ಹಕ್ಕಿಗೆ ಬೇಡಿಕೆ ಇಟ್ಟಿವೆ. ಈ ಪೈಕಿ ಯಾವ ನಿರ್ಮಾಣ ಸಂಸ್ಥೆಗೆ ಇದು ಫೈನಲ್ ಆಗಲಿದೆ ಎಂಬ ಮಾಹಿತಿ ಇನ್ನಷ್ಟೇ ರಿವೀಲ್ ಆಗಬೇಕಿದೆ. ಇನ್ನು, ಮುಂದಿನ ದಿನಗಳಲ್ಲಿ ಸಿನಿಮಾ ಹಿಂದಿ ಭಾಷೆಯಲ್ಲೂ ರಿಲೀಸ್ ಆದರೂ ಅಚ್ಚರಿ ಏನಿಲ್ಲ. ಇದಲ್ಲದೆ, ತಮಿಳಿನ ಕೆಲ ಸಂಸ್ಥೆಗಳು ಸಿನಿಮಾದ ರಿಮೇಕ್ ಹಕ್ಕಿಗೆ ಬೇಡಿಕೆ ಇಟ್ಟಿದೆ.