ಕ್ಷಮೆಯಾಚಿಸಿದರು ಭಾರತ ವಿರೋಧಿ ಕೃತ್ಯ ನಡೆಸಿ ಮತ್ತೆ ಯಡವಟ್ಟು ಮಾಡಿಕೊಂಡ ಮಾಲ್ದೀವ್ಸ್ ಮಾಜಿ ಸಚಿವೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಪೋಸ್ಟ್ ಹಂಚಿಕೊಂಡು ವಿವಾದ ಸೃಷ್ಟಿಯಾದ ಬೆನ್ನಿಗೇ ಮಾಲ್ದೀವ್ಸ್‌ನ ಮಾಜಿ ಸಚಿವೆ ಮರಿಯಮ್ ಶಿಯುನಾ ಕ್ಷಮೆಯಾಚಿಸಿದ್ದಾರೆ.
ತಮ್ಮ ಪೋಸ್ಟನ್ನು ತಕ್ಷಣವೇ ಅಳಿಸಿಹಾಕಿರುವ ಶಿಯುನಾ, ನನ್ನ ಇತ್ತೀಚಿನ ಪೋಸ್ಟ್ ವಿಷಯದಿಂದ ಉಂಟಾದ ಗೊಂದಲ ಅಥವಾ ಅಪರಾಧಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಎಕ್ಸ್‌ನಲ್ಲಿ ಬರೆದುಕೊ0ಡಿದ್ದಾರೆ.

ಮಾಲ್ದೀವ್ಸ್‌ನ ಆಡಳಿತಾರೂಢ ಪಕ್ಷದ ಮರಿಯಮ್ ವಿರೋಧ ಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿಯನ್ನು ಟೀಕಿಸುವ ಭರದಲ್ಲಿ ಆಕೆ ಭಾರತ ಧ್ವಜದ ಅಶೋಕ ಚಕ್ರವನ್ನು ಉಲ್ಲೇಖಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಅಂದಹಾಗೆ ಶಿಯುನಾ ಮರಿಯಮ್ ಭಾರತದ ವಿರುದ್ಧ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರಲ್ಲದೆ ಅದಕ್ಕೂ ಬೆಲೆತೆತ್ತಿದ್ದರು!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!