March 31, 2026
Tuesday, March 31, 2026
spot_img

ಮಲ್ಲೇಶ್ವರಂನ ಮಂತ್ರಿ ಮಾಲ್‌ಗೆ ಮತ್ತೆ ಬೀಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಕಿ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಲಾಗಿದೆ.ಇಂದು ಬೆಳಗ್ಗೆ ಮಾಲ್‌ಗೆ ತೆರಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ವೇಳೆ ಮಾಲ್ ಮುಂಭಾಗ ನೂರಾರು ಸಿಬ್ಬಂದಿ ಇದ್ದರು.

30.81 ಕೋಟಿ ಪ್ರಾಪರ್ಟಿ ಟ್ಯಾಕ್ಸ್ ಅನ್ನು ಜಿಬಿಎಗೆ ಪಾವತಿ ಮಾಡಬೇಕಿದೆ. ಈ ಹಿನ್ನೆಲೆ ಬೆಳಗ್ಗೆಯಿಂದಲೇ ನೂರಾರು ಜನ ನೌಕರರು ರೋಡ್‌ನಲ್ಲಿ ನಿಂತು ಕಾಯುವಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಮಾಲ್ ಒಳಪಡುತ್ತದೆ. ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ಸೀಜ್ ಮಾಡಿರ್ತಾರೆ. ಹಲವು ಬಾರಿ ನೋಟಿಸ್ ಕೊಟ್ಟಿರ್ತಾರೆ. ಮಂತ್ರಿ ಮಾಲ್‌ನವರು ನಷ್ಟದಲ್ಲಿ ಇರಲಿಕ್ಕಿಲ್ಲ. ನಿಯಮದ ಪ್ರಕಾರ ತೆರಿಗೆ ಪಾವತಿ ಮಾಡ್ಬೇಕಿತ್ತು. ಟ್ಯಾಕ್ಸ್ ಕಟ್ಟದ ಕಾರಣ ಸೀಜ್ ಮಾಡಿರ್ತಾರೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !